ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ರದ್ದತಿಗೆ ಸಮಾನ ಮನಸ್ಕರ ವೇದಿಕೆ ಸೇರಿದಂತೆ ಸಂಘಟನೆಗಳಿಂದ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಬೇರೆ ಬೇರೆ ಸಂಘಟನೆಗಳಿಂದಲೂ ಕಾಯ್ದೆ ರದ್ದತಿಗೆ ತೆರೆಮರೆ ಒತ್ತಡವಿದ್ದು ಅದರಂತೆಯೇ ಕಾಂಗ್ರೆಸ್ ಸರ್ಕಾರ ಕಾಯ್ದೆ ವಾಪಸಾತಿಗೆ ಒಲವು ತೋರಿದೆ. ಕಾನೂನು ಇಲಾಖೆಯಿಂದ ಮಾಹಿತಿ ಪಡೆಯಲಿರುವ ಸರ್ಕಾರ, ಅಗತ್ಯವಿದ್ದರೆ ಸಂಪುಟ ಉಪಸಮಿತಿ ರಚಿಸಿ ವರದಿ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ಸಂಪುಟ ಸಭೆಯಲ್ಲಿಟ್ಟು ಅಂತಿಮ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.
ಹೊಸ ಸರ್ಕಾರ ರಚನೆಯಾಗಿದ್ದು ಹೊಸ, ಹೊಸ ಯೋಜನೆಗಳು ಜಾರಿಯಾಗಿವೆ. ಇದರ ನಡುವೆ ಈ ಹಿಂದೆ ಬಿಜೆಪಿ ಸರ್ಕಾರ(BJP Government) ಜಾರಿ ಮಾಡಿದ್ದ ಕೆಲ ಯೋಜನೆ, ಆದೇಶ, ಕಾನೂನುಗಳಿಗೆ ಕತ್ತರಿ ಹಾಕಲು ನೂತನ ಕಾಂಗ್ರೆಸ್ ಸರ್ಕಾರ( Congress Government) ಸಜ್ಜಾಗ್ತಿದೆ. ಅಲ್ಲದೆ ಗೋಹತ್ಯೆ ನಿಷೇಧ ಕಾಯ್ದೆ(Cattle slaughter) ರದ್ದು ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಪಶುಸಂಗೋಪನಾ ಸಚಿವ ವೆಂಕಟೇಶ್(Minister Venkatesh) ಹೇಳಿದ್ದಾರೆ. ಅಷ್ಟೇ ಅಲ್ಲ ಕೋಣ, ಎಮ್ಮೆ ಕಡಿದ್ರೆ, ಆಕಳನ್ನ ಯಾಕೆ ಕಡಿಯಬಾರ್ದು ಅಂತಾ ಪ್ರಶ್ನಿಸಿದ್ದಾರೆ. ಸಚಿವರ ಇದೇ ಮಾತು ಕೇಸರಿ ಪಡೆ ಕೆಂಡವಾಗುವಂತೆ ಮಾಡಿದೆ.