ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷ ಸಹ (2023-24 ನೆ ಸಾಲಿನ) ಸಾರ್ಥಕ ಫೌಂಡೇಶನ್ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಲು ಮುಂದಾಗಿದ್ದಾರೆ.
ಅದೇ ರೀತಿ ಇಂದು ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಭಾಗವಹಿಸಿದ್ದರು. ಬಸವನಗುಡಿಯ ಎನ್ ಆರ್. ಕಾಲೋನಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಇಂದು 200 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು
ಈ ವೇಳೆ ವಿಸ್ತಾರ ಏರ್ ಲೈನ್ಸ್ ಚೇರ್ಮನ್ ಆಗಿರುವ ಭಾಸ್ಕರ್ ಭಟ್ , ವಿಧಾನಪರಿಷತ್ ಪರಿಷತ್ ಸದಸ್ಯ ಟಿ.ಎ.ಶರವಣ ಚೆಕ್ ವಿತರಿಸಿದರು. ಹಾಗೆ ಇವರನ್ನು ಸಾರ್ಥಕ ಫೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿವೇತನ (Scholarship), ವಿದ್ಯಾರ್ಥಿಗಳ ಜೀವನದ ಒಂದು ಅತ್ಯಮೂಲ್ಯ ನಿಧಿ ಎನ್ನಬಹುದು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಥವಾ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ (Students) ರಾಜ್ಯ ಸರ್ಕಾರ, ಅನೇಕ ಇಲಾಖೆಗಳು ಮತ್ತು ನಿಗಮಗಳು, ದಾನಿಗಳು, ಯಾವುದಾದರೂ ಫೌಂಡೇಶನ್ ಹೀಗೆ ಹಲವರು ಮುಂದಿನ ಶಿಕ್ಷಣಕ್ಕೆ (Education) ಪ್ರೋತ್ಸಾಹದಾಯಕವಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಾರೆ.
ಸಾರ್ಥಕ ಫೌಂಡೇಷನ್ ಹಿನ್ನೆಲೆ:
ಸಾರ್ಥಕ ಫೌಂಡೇಷನ್ 2016ರಲ್ಲಿ ಹುಟ್ಟಿದಂತ ಒಂದು ಪುಟ್ಟ ಕೂಸು. ಕೆಲವು ಧ್ಯೇಯಗಳನ್ನು ಇಟ್ಟುಕೊಂಡು 14 ದಂಪತಿಗಳು ಸೇರಿ ಮಾಡಿರುವಂತಹ ಫೌಂಡೇಷನ್. ಈ ಸಂಸ್ಥೆಯ ಮೂಲ ಉದ್ದೇಶವೇನಂದರೆ ಬಡ ಮಕ್ಕಳಿಗೆ ಅವರ ಕಾಲು ಮೇಲೆ ನಿಂತುಕೊಳ್ಳಲು ಸಹಾಯವಾಗಲು ಸ್ಕಾಲರ್ಶಿಪ್ ಅನ್ನು ನೀಡಲಾಗುವುದು.
ಸಾರ್ಥಕ ಪ್ರತಿಷ್ಠಾನವು ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ನಂಬುತ್ತದೆ, ಅದು ಅರಿತುಕೊಂಡಾಗ, ಸಾಮಾಜಿಕ ಬದಲಾವಣೆಗೆ ಮೂಲಾಧಾರವಾಗಿದೆ. ಅವಕಾಶವಂಚಿತರಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಮೂಲಕ ಅವರ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸುವಲ್ಲಿ ನಾವು ಅವರನ್ನು ಸಕ್ರಿಯಗೊಳಿಸಲು ಕೆಲಸ ಮಾಡುತ್ತೇವೆ ಎಂದು ಸಾರ್ಥಕ ಫೌಂಡೇಷನ್ ಅಧ್ಯಕ್ಷರಾದ ರಾಮ್ ಪ್ರಸಾದ್ ತಿಳಿಸಿದರು.