ಬೆಂಗಳೂರು: ಬಜರಂಗ ದಳ ಬ್ಯಾನ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆಗೆ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಅನೇಕ ಕಡೆ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಒದಗಿದೆ.
ಪಂಚಾಯತ್ ಸಚಿವ ಸ್ನೇಹಿತ ಪ್ರಿಯಾಂಕ್ ಖರ್ಗೆ ಬಜರಂಗದಳ ನಿಷೇಧಿಸುವ ತವಕವನ್ನು ಕೈಬಿಟ್ಟು ರಾಜ್ಯದ ಜನತೆಗೆ ಕುಡಿಯುವ ನೀರಿಗೆ ಹಣ ಬಿಡುಗಡೆ ಮಾಡಲೆಂಬುದೇ ಆಗ್ರಹ ಎಂದು ಕೋರಿದ್ದಾರೆ.
ಇದೆ ವೇಳೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈಗ ಟ್ವೀಟ್ ಮೂಲಕ ಸೂಲಿಬೆಲೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಎಂ.ಬಿ ಪಾಟೀಲ್ ನುಡಿ ಅಚ್ಚರಿಯೆನಿಸಿದೆ. ಸೂಲಿಬೆಲೆಯನ್ನು ಜೈಲಿಗಟ್ಟಲು ಸೂಲಿಬೆಲೆ ಭಯೋತ್ಪಾದಕರಲ್ಲ ಬದಲಾಗಿ ರಾಷ್ಟ್ರೀಯವಾದಿಯೊಬ್ಬನನ್ನು ಬಂಧಿಸಿದರೆ ಬಿಜೆಪಿ ಕೈಕಟ್ಟಿ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.