ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ತಾಲೂಕು ಗಾಣಿಗ ಸಮಾಜ ಹಾಗೂ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಮಖಂಡಿ ಇವರ ಸಹಯೋಗದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಷ್ಟಪಟ್ಟು ಶ್ರಮವಹಿಸಿ ಪಾಲಕರ ಶಿಕ್ಷಕರ ಹಾಗೂ ಸಮಾಜದ ಹೆಸರು ಬರುವಂತಾಗಬೇಕು.
ತಳಮಟ್ಟದಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕೃತಿ ನೀಡಬೇಕು ಎಂದರು. ಈಗಾಗಲೇ ಸಮಾಜದ ೩ ಎಕರೆ ಜಮೀನು ಇದ್ದು ಅದನ್ನು ಸಮಾಜದ ಅಭಿವೃಧ್ಧಿಗಾಗಿ ಬೆಳೆಸಲು ಎಲ್ಲರೂ ಕೈ ಜೋಡಿಸೋಣ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ಪಾಲಕರ ಹೊಣೆಯಾಗಿದೆ. ಸಮಾಜದ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ಗಾಣಿಗ ಸಮಾಜದ ತಾಲೂಕಾ ಅಧ್ಯಕ್ಷ ಕೆ.ಕೆ ತುಪ್ಪದ ಮಾತನಾಡಿ ಪಾಲಕರು ಮಕ್ಕಳ ಕಡೆಗೆ ಎಚ್ಚರ ವಹಿಸಬೇಕು ಮಕ್ಕಳು ಏನು ಮಾಡುತ್ತಿದ್ದಾರೆ ಹಾಗೂ,
ಅವರು ಎಷ್ಟರಮಟ್ಟಿಗೆ ಓದುತ್ತಿದ್ದಾರೆ ಹಾಗೂ ಯಾವ ರೀತಿಯ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಪಾಲಕರು ತಿಳಿದುಕೊಳ್ಳುತ್ತಿರಬೇಕು. ಜಗತ್ತಿನಲ್ಲಿ ಅಸಾಧ್ಯ ಎಂಬ ಶಬ್ದವೇ ಇಲ್ಲ ಅದರಿಂದ ವಿದ್ಯಾರ್ಥಿಗಳು ಪ್ರಯತ್ನ ಮಾಡುವುದರ ಮೂಲಕ ತಮ್ಮ ಯಶಸ್ಸನ್ನು ಕಾಣಬೇಕು. ಮಕ್ಕಳ ಪಾಲನೆ ಪೋಷಣೆ ನೀಡುವುದರ ಜೊತೆಗೆ ಅವರಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ಪಾಲಕರ ಹೊಣೆಯಾಗಿರುತ್ತದೆ ಇವತ್ತು ಸಮಾಜ ಬಹಳಷ್ಟು ಹಿಂದುಳಿಯುತ್ತಿದೆ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದ ಇವತ್ತು ಹಲವಾರು ತಪ್ಪುಗಳು ಕೂಡ ಕಾಣಿಸಿಕೊಳ್ಳುತ್ತವೆ ಎಂದು ಹೇಳಿದರು.
ಶ್ರೀಸಿದ್ಧ ಮುತ್ಯಾ ಸಿದ್ಧ ಕ್ಷೇತ್ರ ಜಮಖಂಡಿ ಆಶಿರ್ವಚನ ನೀಡಿ ಮಾತನಾಡಿದ ಮನುಷ್ಯ ಇರುವಷ್ಟು ದಿನ ನಗುತ್ತಾ ಜೀವನ ನಡೆಸಬೇಕು ಕೈ ತುಂಬಾ ಕೆಲಸ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಕಣ್ಣು ತುಂಬಾ ನಿದ್ದೆ ಮಾಡಿ ಆನಂದದಿಂದ ಜೀವನ ನಡೆಸಬೇಕು ಅತಿಯಾಗಿ ಖರ್ಚು ಮಾಡದೆ ಮಿತವಾಗಿ ಇರಬೇಕು. ಇವತ್ತು ಸಮಾಜ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಾಧಕರಿಗೆ ನಿವೃತ್ತಿ ಯೋಧರಿಗೆ ಸನ್ಮಾನ ಮಾಡುವುದು ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ ಎಂದರು.
ಎಸ್.ಎಸ್.ಎಲ್.ಸಿ, ೬೭ ಪಿಯುಸಿ ಯಲ್ಲಿ ಸಾಧನೆಗೈದ ವಿಧ್ಯಾರ್ಥಿಗಳಿಗೆ ಮತ್ತು ನಿವೃತ್ತ ಸೈನಿಕರು ಹಾಗೂ ನೌಕರರಿಗೆ ಸನ್ಮಾನಿಸಲಾಯಿತು. ಆರ್ ಎಸ್ ಕಟ್ಟಿಮನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎನ್.ಎಸ್. ತುಪ್ಪದ ಸ್ವಾಗತಿಸಿದರು. ಕವಿತಾ ರಾಮದುರ್ಗ ಮತ್ತು ಹನಮಂತ ಅರಕೇರಿ ನಿರೂಪಿಸಿದರು. ಬಸವರಾಜ ಸಾವಳಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಆನಂದ್ ನ್ಯಾಮಗೌಡ. ತಾಯಿ ಸುಮಿತ್ರಾ ನ್ಯಾಮಗೌಡ, ನೌಕರ ಸಂಘದ ಅಧ್ಯಕ್ಷ ಜಗದೀಶ ಪಾಸೋಡಿ, ಜ್ಯೋತಿ ಬ್ಯಾಂಕ ಅಧ್ಯಕ್ಷ ಸಂಗಪ್ಪ ದಡ್ಡಿಮನಿ , ಸರಕಾರಿ ನೌಕರ ಸಂಘ ಪಿ.ಬಿ.ಅಜ್ಜನ್ನವರ, ಸಿ.ಜಿ.ಕಡಕೋಳ, ಬಿ.ಎನ್.ತಿಪ್ಪನ್ನವರ, ಎನ್ .ಎಸ್ ದೇವರವರ ,ಮಲ್ಲಿಕಾರ್ಜುನ ನಿಂಗನೂರ್, ನಾಗಪ್ಪ ಮುತ್ತಕ್ನವರ್, ಮಲ್ಲಪ್ಪ ಹೆಗ್ಗೊಂಡ, ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ