ಹುಬ್ಬಳ್ಳಿ: ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ’ ಎಂಬ ನಮ್ಮ ಜಾನಪದ ಹಾಡಿನಂತೆ ಕಾರಹುಣ್ಣಿಮೆ ಹಬ್ಬವನ್ನ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ವಿವಿಧ ರೀತಿಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕಾರಹುಣ್ಣಿಮೆ ಆಚರಣೆ ಮಾಡಲಾಯಿತು.
ರೈತರ ಪ್ರಮುಖ ಮುಂಗಾರು ಹಬ್ಬವಾದ ಕಾರಹುಣ್ಣಿಮೆಯನ್ನು ಗುರುವಾರ ಬೀದರ್ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರೈತರು ಎತ್ತುಗಳನ್ನು ಮತ್ತು ಎತ್ತಿನಗಾಡಿ, ಕೂರಗಿ, ಗುಂಟಿ ಇನ್ತಿತರ ಕೃಷಿ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಿ ಎತ್ತುಗಳಿಗೆ ಹೊಸ ಗೆಜ್ಜೆಗಳನ್ನು ಹಾಕಿ ಕೊಂಬುಗಳಿಗೆ ಬಣ್ಣ ಬಳಸಿ ನೋಡುಗರ ಗಮನ ಸೇಳೆಯುವಂತೆ ಮಾಡಲಾಗಿತ್ತು. ಎತ್ತುಗಳಿಗೆ ಅಲಂಕರಿಸಿ ಹೊನ್ನುಗ್ಗಿ ಆಚರಿಸಿದರು. ಎತ್ತುಗಳಿಗೆ ಜೋಳ,
ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಹುಗ್ಗಿಯನ್ನು ತಿನ್ನಿಸುವ ಮೂಲಕ ಎತ್ತುಗಳನ್ನು ಗೌರವಿಸುವ ಕಾರ್ಯ ನಡೆಯಿತು. ಎತ್ತುಗಳಿಗೆ ಹೋಳಿಗೆ, ಹುಗ್ಗಿನೀಡಿ ರೈತರು ಸಂಭ್ರಮಿಸಿದರು. ಹಬ್ಬದ ನಿಮಿತ್ತ ರೈತರ ಮನೆಗಳಲ್ಲಿ ಸಡಗರ ಕಂಡುಬಂತು. ಮುಂಗಾರು ಬೆಳೆ ಉತ್ತಮವಾಗಿ ಬೆಳೆದು ಉತ್ತಮ ಲಾಭ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಮನೆಯಿಂದ ಎತ್ತುಗಳನ್ನು ಗ್ರಾಮದ ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.
ಕಲ್ಮೇಶ ಹುಬ್ಬಳ್ಳಿ