ಕೊಪ್ಪಳ: ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡಲೇಬೇಕು ಎಂದು ಕೊಪ್ಪಳದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಬಿಜೆಪಿಯವರು ಈ ರಾಜ್ಯವನ್ನು ಹರಾಜು ಹಾಕಿದ್ದಾರೆ. 40% ಸರ್ಕಾರ ಹೆಸರು ಪಡೆದು ರಾಜ್ಯದ ಮರ್ಯಾದೆ ತೆಗೆದಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ IPS ಅಧಿಕಾರಿ ಬಂಧನ ಆಗಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಇದ್ದವರನ್ನು ಅರೆಸ್ಟ್ ಮಾಡಿಲ್ಲ. ತನಿಖೆ ಮಾಡದಿದ್ರೆ ಯುವ ಜನತೆಗೆ ಅನ್ಯಾಯ ಮಾಡಿದಂತೆ ಆಗುತ್ತೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.