ಬೆಂಗಳೂರು: “ವಿಶ್ವ ಪರಿಸರ ದಿನ” ಹಿನ್ನೆಲೆಯಲ್ಲಿ ರೋಟರಿ ಬೆಂಗಳೂರು ಸೌತ್ ಪರೇಡ್ ಹಾಗೂ ಅವರ ಅಂಗ ಸಂಸ್ಥೆ ಗಳ ಸಹಕಾರದಿಂದ ದೇವನಹಳ್ಳಿ ಟೌನ್ ಗೆ 2 ಲಕ್ಷ ಲೀಟರ್ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ಇದೇ ವೇಳೆ ಹಣ್ಣಿನ ಗಿಡಗಳನ್ನೂ ಕೂಡ ನೆಟ್ಟು ಪರಿಸರ ದಿನ ಆಚರಿಸಲಾಯಿತು.
ಕೆರೆಯ ನೀರು ಪಕ್ಕದ ಬಾವಿ ನೀರಿಗೆ ಭೂಮಿಗೆ ಹರಿಸಿ ಮತ್ತೆ ನೈಸರ್ಗಿಕ ಸೋಸುವ ವಿಧಾನ ಹಾಗೂ ಮತ್ತೆ ಅದನ್ನ ಕೊಳವೆ ಬಾವಿ ಮೂಲಕ ಮಗದೊಂದು ಸೋಸುವ ಸಲಕರಣೆಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರೆ.
ಇದೇ ವೇಳೆ ರೋಟರಿ ಗೌರ್ನರ್ ಜಿತೇಂದ್ರ ಅನೇಜ, ರೋಟರಿ ಪ್ರೆಸಿಡೆಂಟ್ ಆನಂದ ರಾಮಚಂದ್ರ,ರೋಟರಿ ಸಂಸ್ಥೆಯ ಸುದರ್ಶನ್, ರೋಟೆರಿಯನ್ ಶಿವಕುಮಾರ್ ಹಾಗೂ ರೋಟೆರಿಯನ್ ಚಂದ್ರಶೇಖರ್ ಹಾಗೂ ಸೌತ್ ಪರೇಡ್ ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಈ ವೇಳೆ ದೇವನಹಳ್ಳಿ ಬಾಲಕಿಯರ ಶಾಲೆ ಗಣಕೀಕರಣ ಕೂಡ ನಡೆಸಲಾಯಿತು.