ಬೆಂಗಳೂರು: ದೇಶದಲ್ಲಿ ಗೋಹತ್ಯೆ ನಿಷೇಧ ಆಗಬೇಕು ಅನ್ನೋದು ಎಲ್ಲರ ಆಶಯ. ಈ ಸರ್ಕಾರದಲ್ಲಿ ಉದ್ಧಟತನ ತೋರುತ್ತಿದ್ದಾರೆ. ಪೇಪರ್ ಹೇಳಿಕೆಗಳು ಬೇಕಾಗಿಲ್ಲ ಕೆಲಸ ಮಾಡುವುದಕ್ಕೆ ಶುರುಮಾಡಿ.
200 ಯೂನಿಟ್ ಫ್ರೀ ಅಂತಾ ಹೇಳಿ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಎಲ್ಲ ಕಡೆ ದರ ಕಡಿಮೆ ಮಾಡುತ್ತಿದ್ರೆ ಇವರೇಕೆ ಏರಿಕೆ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.