ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯಾಕೆ ಮುನ್ನೆಲೆಗೆ ಬರ್ತಿದೆ ಗೊತ್ತಿಲ್ಲ ಎಂದು ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ತಿಳಿಸಿದರು.
ಅವರಿಗೆ ಅನಿಸಿದ್ದನ್ನು ಪಶುಸಂಗೋಪನಾ ಸಚಿವರು ಹೇಳಿದ್ದಾರೆ. ಕಾಯ್ದೆ ಬಗ್ಗೆ ಅಧಿವೇಶನ ಪ್ರಾರಂಭಕ್ಕೂ ಮುನ್ನ ಚರ್ಚೆ ಆಗಲಿದೆ. ಯಾವ ಬಿಲ್ ತರಬೇಕು, ಯಾವ್ಯಾವ ಬಿಲ್ ತರಬಾರದೆಂಬ ಚರ್ಚೆ ನಡೆಯುತ್ತೆ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಹೂಂ ಎನ್ನಬೇಕು ಎಂದರು.