ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ದಳಪತಿಗಳು ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯ ಜೊತೆ ಬಿಬಿಎಂಪಿ, ಲೋಕಸಭೆಗೆ ಸಜ್ಜಾಗ್ತಿದ್ದು ಪಕ್ಷ ಸಂಘಟನೆಗೆ ಮೇಜರ್ ಸರ್ಜರಿಗೆ ಮುಂದಾಗಿದ್ದಾರೆ. ಯಾರ ಜೊತೆಯೂ ಮೈತ್ರಿ ಇಲ್ಲ ಎಂದಿರುವ ದೊಡ್ಡಗೌಡ್ರು ಸಮುದಾಯವಾರು ನಾಯಕರನ್ನು ಬೆಳಸಲು ಪ್ಲಾನ್ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನೇ ಅಸ್ತ್ರವಾಗಿಸಿ ಕೊಂಡಿರುವ HDK ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಮರ ಸಾರಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯವಾಗಿ ಸೋತು ನೆಲಕಚ್ಚಿದೆ, ಹಾಲಿ ಪ್ರಭಾವಿ ಶಾಸಕರೆಲ್ಲಾ ಸೋತು ಸುಣ್ಣವಾಗೋದ್ರು. ಸೋಲಿನ ಆತ್ಮಾವಲೋಕನ ನಡೆಸಿದ ದಳಪತಿಗಳು ಸೋಲಿಗೆ ಕಾರಣಗಳೇನು ಎಂಬ ವಿಮರ್ಶೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪುಟಿದೇಳುವ ಆತ್ಮವಿಶ್ವಾಸದಲ್ಲಿದ್ದು ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಿ ಸಂಘಟನೆಗೆ ಮುಂದಾಗಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಬಿಬಿಎಂಪಿ, ಲೋಕಸಭಾ ಚುನಾವಣೆಗೆ ಜೆಡಿಎಸ್ ತಯಾರಾಗ್ತಿದೆ.
ಪಕ್ಷ ಸಂಘಟನೆ ತಮ್ಮ ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಮಾಜಿ ಪ್ರಧಾನಿ ದೇವೆಗೌಡ್ರು, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಂಟಿ ಸುದ್ದಿ ಗೋಷ್ಠಿ ನಡೆಸಿ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ರು. ದೇವೆಗೌಡ್ರು ಮಾತನಾಡಿ ಪಕ್ಷ ಸಂಘಟನೆ ಬಗ್ಗೆ ಹೆಚ್ಚು ಗಮನ ಕೊಡಬೇಕು. ಪ್ರತಿಯೊಂದು ಸಮುದಾಯವನ್ನ ಗುರುತಿಸಿ ಎಲ್ಲಾ ಸಮುದಾಯಕ್ಕು ಅವಕಾಶ ಕೊಡಬೇಕು, ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಇದ್ದಾರೆ. ಪಕ್ಷ ಎಲ್ಲಿ ಪ್ರವಾಸಕ್ಕೆ ಹೋಗಬೇಕಂತ ತೀರ್ಮಾನ ಮಾಡುತ್ತೊ
ಅಲ್ಲಿ ಹೋಗಿ ನಾನು ಪ್ರಚಾರ ಮಾಡ್ತಿನಿ, ಫಲಿತಾಂಶದ ಕಡೆ ನಾನು ಹೆಚ್ಚು ಗಮನ ಕೊಡಲ್ಲ. ಕಾರ್ಯಕರ್ತರನ್ನು ಒಂದುಗೂಡಿಸಿ ಪ್ರೋತ್ಸಾಹ ಕೊಟ್ಟು ಪಕ್ಷ ಸಂಘಟನೆ ಮಾಡೋದು ನಮ್ಮ ಗುರಿ. ಪ್ರಾದೇಶಿಕ ಪಕ್ಷವನ್ನ ಉಳಿಸಿಕೊಳ್ಳಬೇಕಾಗಿದೆ ಕಳೆದ ಬಾರಿ ಮೈತ್ರಿ ಮಾಡಿಕೊಂಡು ಎಡವಿದ್ದೇವೆ ಈ ಭಾರಿ ಯಾರ ಜೊತೆಯೂ ಮೈತ್ರಿ ಇಲ್ಲ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇವೆ ಎಂದ ದೊಡ್ಡಗೌಡ್ರು.
ಮುಂದಿನ 4 ದಿನಗಳ ಕಾಲ ನಮ್ಮ ಅಜೆಂಡಾ, ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಸಭೆ ನಡೆಯುತ್ತೆ. ಪಕ್ಷಕ್ಕೆ ಮೇಜರ್ ಸರ್ಜರಿ ಮಾಡ್ತೆವೆ, ಅಧ್ಯಕ್ಷರುಗಳು, ಉಸ್ತುವಾರಿಗಳ ಬದಲಾವಣೆಯಾಗುತ್ತೆ.
ನಮ್ಮ ರಾಜ್ಯದ ಸಚಿವರೊಬ್ಬರು ನೀರಾವರಿ ಯೋಜನೆ ಬಗ್ಗೆ ಮಾತನಾಡಿದ್ದಾರೆ, ಈಗಿನ ಸರ್ಕಾರ ಎಲ್ಲಾ ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸಿದ್ರೆ ನಮ್ಮ ಬೆಂಬಲ ಇದೆ, ಇಲ್ಲವಾದ್ರೆ ಹೋರಾಟ ಮಾಡ್ತೀವಿ. 200 ಯುನಿಟ್ ಫ್ರೀ ಅಂತ ಹೇಳಿ, ಷರತ್ತು ಹಾಕಿರುವವರು ಅವತ್ತೇ ಯೋಚನೆ ಮಾಡಬೇಕಿತ್ತಲ್ವಾ ನೀವು, ಷರತ್ತಿನ ಬಗ್ಗೆ. ಡಿಕೆಶಿ ಹೇಳ್ತಾರೆ ಸ್ನೇಹಕ್ಕೂ ಸಿದ್ಧ ಸಮರಕ್ಕೂ ಬದ್ಧ ಅಂತ , ನಾವು ಸ್ನೇಹಕ್ಕೆ ವಿಪಕ್ಷದಲ್ಲಿ ಕೂತಿಲ್ಲ ಸಮರಕ್ಕೆ ಸಿದ್ಧವಾಗಿರೋದು ಎಂದು ಡಿಕೆಶಿಗೆ HDK ಟಾಂಗ್ ಕೊಟ್ರು. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಏನು ಸಿಗುತ್ತೆ ಅನ್ನೋದ್ರ ಮೇಲೆ ನಮ್ಮ ಹೋರಾಟ ತೀರ್ಮಾನ ಮಾಡ್ತೇವೆ, ಕಾಂಗ್ರೆಸ್ ದು ಯಾವುದೂ ಗ್ಯಾರಂಟಿ ಇಲ್ಲ, ಎಲ್ಲಾ ಡೂಫ್ಲಿಕೇಟ್ ಆಗೋಗಿದೆ. ವಿಧಾಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡ್ತೀನಿ, ಯಾವುದನ್ನೂ ಬಿಡಲ್ಲ ಎಂದ್ರು ಕುಮಾರಸ್ವಾಮಿ….
ದಳಪತಿಗಳು ಸೋಲಿತ ಆತ್ಮಾವಲೋಕನದ ನಂತರ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ, ಪಕ್ಷಕ್ಕೆ ಮೇಜರ್ ಸರ್ಜರಿಗೆ ಮುಂದಾಗಿದ್ದು. ರಾಜ್ಯಾದ್ಯಂತ ಸಮುದಾಯವಾರು ನಾಯಕತ್ವಕ್ಕೆ ಮಣೆಹಾಕ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರವಾಗಿಸಿಕೊಂಡಿರುವ ದಳಪತಿಗಳು ಬಜೆಟ್ ಘೋಷಣೆಯ ನಂತರ ಹೋರಾಟದ ರೂಪುರೇಷೆ ಸಿದ್ದಪಡಿಸಲು ಪ್ಲಾನ್ ಮಾಡ್ತಿದ್ದಾರೆ.