ಬೆಂಗಳೂರು: ಕಾಂಗ್ರೆಸ್(Congress) ಜಾರಿ ಮಾಡಿದ ಗ್ಯಾರಂಟಿಗಳ(Congress Guarantee) ಸುತ್ತ ದಿನಕ್ಕೊಂದು ಗೊಂದಲ ಹುಟ್ಟಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗೋಕೆ ಸರ್ಕಾರ ಷರತ್ತುಗಳ ಸಂಕೋಲೆ ಹೊರಡಿಸೋಕೆ ಮುಂದಾಗ್ತಿದೆ ಅನ್ನೋ ಸುದ್ದಿ ನಡುವೆ, ಜನಸಾಮಾನ್ಯರು ಯೋಜನೆಗಳನ್ನ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಅಂತ ತಲೆ ಕೆಡಿಸಿಕೊಂಡು ಕೂತಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಮೊದಲು ಎಲ್ಲಾ ಗೃಹಿಣಿಯರಿಗೆ ₹2 ಸಾವಿರ ಕೊಡ್ತೀವಿ ಎಂದಿದ್ದರು. ಆದರೆ ಈಗ ಗೃಹ ಲಕ್ಷ್ಮೀ ಯೋಜನೆಗೆ ಕಂಡಿಷನ್ ಹಾಕುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. APL, BPL ಮಹಿಳೆಯರಿಗೆ 2 ಸಾವಿರ ರೂ. ಕೊಡ್ತೀವಿ ಎಂದಿದ್ದರು. ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಣ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರು ಮಾತಿಗೆ ತಪ್ಪುತ್ತಿರೋದು ಸರಿಯಲ್ಲ. ಮಹಿಳೆಯರು, ನಾಗರಿಕರ ಪರವಾಗಿ ನಾವು ಹೋರಾಟ ಮಾಡ್ತೇವೆ ಎಂದರು.