ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ(gulbarga university )ಅತಿಥಿ ಉಪನ್ಯಾಸಕರದ್ದು ಎನ್ನಲಾದ ಕಾಮಕೇಳಿ ಆಡಿಯೋ ಒಂದು ಇದೀಗ ವೈರಲ್ ಆಗಿದೆ. ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕ(guest lecturer), ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದಿರುವುದು ಆಡಿಯೋದಲ್ಲಿದೆ. ಈ ಆಡಿಯೋ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕನದ್ದು ಎನ್ನಲಾಗಿದ್ದು,ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿ ಜೊತೆ ಒಟ್ಟು 23 ನಿಮಿಷ ಮಾತನಾಡಿರುವ ಈ ಆಡಿಯೋ ವಿಶ್ವವಿದ್ಯಾಯಲದ ಕ್ಯಾಂಪಸ್ನಲ್ಲಿ ಕಂಪನ ಸೃಷ್ಟಿಸಿದೆ.
ಎಂಬಿಎ ವಿಭಾಗದ ಕೊನೆಯ ಸೆಮಿಸ್ಟರ್ ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ಆಡಿಯೋದಲ್ಲಿದೆ. ನೀನು ನನಗೆ ಗರ್ಲ್ ಪ್ರೆಂಡ್ ಆಗಿರು ಎಂದು ಅತಿಥಿ ಉಪನ್ಯಾಸಕ ವಿದ್ಯಾರ್ಥಿನಿಗೆ ಪೀಡಿಸಿದ್ದಾರೆ. ಆದ್ರೆ, ಅತಿಥಿ ಉಪನ್ಯಾಸಕನ ಮಾತಿಗೆ ವಿದ್ಯಾರ್ಥಿನಿ ನೋ ಎಂದಿದ್ದಾಳೆ. ಆರು ತಿಂಗಳ ಹಿಂದೆ ಮಾತನಾಡಿದ್ದ ಆಡಿಯೋ ಇದೀಗ ವೈರಲ್ ಆಗಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಆದ್ರೆ, ಇದೀಗ ಈ ಆಡಿಯೋ ಫುಲ್ ವೈರಲ್ ಆಗಿದ್ದು, ಗುಲಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಭಾರೀ ಸಂಚಲನ ಮೂಡಿಸಿದೆ. 23 ನಿಮಿಷ ಆಡಿಯೋದಲ್ಲಿ ಅನೇಕ ಸಂಗತಿಗಳ ಬಗ್ಗೆ ಮಾತನಾಡಿದ್ದು, ಇದು ಹೇಗೆ ಲೀಕ್ ಆಯ್ತು? ಯಾರು ಲೀಕ್ ಮಾಡಿದ್ರು? ಯಾರು ಆ ಅತಿಥಿ ಉಪನ್ಯಾಸಕ? ಎನ್ನುವುದು ನಿಗೂಢವಾಗಿದ್ದು, ಈ ಬಗ್ಗೆ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಮಧ್ಯೆ ಗುಸು-ಗುಸು ಶುರುವಾಗಿದೆ.