ಬೆಂಗಳೂರು: ಕುಂಬಳಗೋಡು ಬಳಿ ಇರುವ ಕಣಮಿಣಿಕೆ ಟೋಲ್ ಪ್ಲಾಜಾದಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿಗೆ ಟೋಲ್ ಸಿಬ್ಬಂದಿ ಅವಾಜ್ ಹಾಕಿರುವ ಘಟನೆ ಜರುಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾನುವಾರ ದಂದು ಬೆಂಗಳೂರಿನಿಂದ ಮಳವಳ್ಳಿಯತ್ತ ಹೊರಟಿದ್ದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ಕಣಮಿಣಿಕೆ ಟೋಲ್ ಬಳಿ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕಾರಿನ ಚಾಲಕ ತಮ್ಮ ಬಳಿ ಪಾಸ್ ಇದೆ ಎಂದು ಹೇಳಿದ್ದರು ಸಹ ಮುಂದಕ್ಕೆ ಬಿಡುವುದಿಲ್ಲ.
ಟೋಲ್ ಸಿಬ್ಬಂದಿ ದುರ್ವತನೆಯನ್ನು ಪ್ರಶ್ನಿಸಿದ ಶಾಸಕ ಹಾಗೂ ಅವರ ಕಾರಿನ ಚಾಲಕನೊಂದಿಗೆ ಏಕವಚನದಲ್ಲೇ ಮಾತನಾಡಲು ಪ್ರಾರಂಭಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು ಶಾಸಕರಿಗೆ ಈ ರೀತಿ ಆದರೆ, ಸಾರ್ವಜನಿಕರ ಕಥೆಯೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ನರೇಂದ್ರ ಸ್ವಾಮಿ ಕಾರನ್ನು ತಡೆದು ಟೋಲ್ ಸಿಬ್ಬಂದಿ ನಮ್ಮೊಂದಿಗೆ ಅನಗತ್ಯವಾಗಿ ವಾಗ್ವಾದ ನಡೆಸಿದ್ದಾರೆ. ಏಕವಚನದಲ್ಲೇ ಮಾತನಾಡಿದ್ದಾರೆ ಈ ಬಗ್ಗೆ ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.