ಬೆಂಗಳೂರು: ರಾಜ್ಯ ಸರ್ಕಾರ ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ ಎಂಬ ಅನುಮಾನಗಳು ವ್ಯಕ್ತವಾಗ್ತಿವೆ..ಹಿಂದೆ ಅವ್ರು ಮಾಡಿದ್ರು ಈಗ ನಾವು ಮಾಡ್ತಿದ್ದೇವೆ ತಪ್ಪೇನು ಅನ್ನೋ ಮನಸ್ಥಿತಿಗೆ ಬಂದಂತಿದೆ..ಬಿಜೆಪಿಯ ಕೇಸರೀಕರಣದ ವಿರುದ್ಧ ಸಮರಸಾರಿದಂತೆ ಕಾಣ್ತಿದೆ..ಬಿಜೆಪಿ ಸರ್ಕಾರ ತಂದ ಕೆಲವು ವಿಚಾರ,ನಿಯಮಗಳಿಗೆ ಬ್ರೇಕ್ ಹಾಕೋಕೆ ಮುಂದಾಗಿದೆ..
ಹಿಂದಿನ ಬಿಜೆಪಿ ಸರ್ಕಾರದ ತಂದಿದ್ದ ಹಲವು ವಿಚಾರ, ನಿಯಮಗಳಿಗೆ ಕಾಂಗ್ರೆಸ್ ಸರ್ಕಾರ ಬ್ರೇಕ್ ಹಾಕೋಕೆ ಹೊರಟಿದೆ.. ಕೇಸರೀಕರಣದ ವಿರುದ್ಧ ಸಮರಸಾರಿದೆ..ಪಠ್ಯ ಪುಸ್ತಕ ಪರಿಷ್ಕರಣೆಯಿಂದ ಹಿಡಿದು,ಗೋಹತ್ಯೆ ಸಂರಕ್ಷಣಾ ಕಾಯ್ದೆ,ಭೂ ಸುಧಾರಣಾ ತಿದ್ದುಪಡಿಕಾಯ್ದೆಗಳ ವಾಪಸ್ ವರೆಗೆ ಹಲವು ವಿಚಾರಗಳಲ್ಲಿ ಬದಲಾವಣೆ ಬಯಸಿದೆ.
ಇನ್ನು ಇದರ ಜೊತೆಗೆ ಪಾರ್ಕ್,ಶಾಲಾ ಕೊಠಡಿ ಗೋಡೆಗಳ ಮೇಲಿನ ಕೇಸರಿ ಬಣ್ಣ ತೆರವು ಮಾಡುವುದಕ್ಕೂ ಮುಂದಾಗಿದೆ.. ಕೊನೆಗೆ ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರದಲ್ಲೂ ಕೇಸರಿ ಕಲರ್ ಇದೆ ಎಂಬ ಕಾರಣಕ್ಕೆ ಸಮವಸ್ತ್ರ ಬದಲಾವಣೆಗೆ ಹೊರಟಿದೆ.
ಹಿಂದುತ್ವದ ಆಧಾರದಮೇಲೆಯೇ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳನ್ನ ಎದುರಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಇದನ್ನೇ ಆಡಳಿತದಲ್ಲಿ ಒಳ ತಂದಿತ್ತು..ಪಠ್ಯ ಪುಸ್ತಕದಿಂದಿಡಿದು,ಗೋ ಹತ್ಯಾ ಸಂರಕ್ಷಣಾ ಕಾಯ್ದೆ,ಮತಾಂತರ ನಿಷೇಧ ಕಾಯ್ದೆಗಳನ್ನ ಅನುಷ್ಠಾನಕ್ಕೆ ತಂದಿತ್ತು.. ಇಷ್ಟೇ ಅಲ್ಲ ಕೇಸರಿಯನ್ನ ಪಾರ್ಕ್ ಗೋಡೆಗಳು, ಶಾಲಾ ಕಟ್ಟಡಗಳ ಮೇಲೂ ಬಳಿಸುವ ಮೂಲಕ ಜನರನ್ನ ಹಿಂದುತ್ವದ ಸಮೂಹಸನ್ನಿಯೆಡೆಗೆ ತಂದಿತ್ತು..ಕೊನೆಗೆ ಬಿಬಿಎಂಪಿ ಪೌರ ಕಾರ್ಮಿಕರ ಸಮವಸ್ತ್ರದ ಮೇಲೂ ಕೇಸರಿ ಉಳಿಯುವಂತೆ ಮಾಡಿತ್ತು..ಆಗ ಇದರ ವಿರುದ್ಧ ಕಾಂಗ್ರೆಸ್ ಸಿಡಿದು ನಿಂತಿತ್ತು..ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು,ಈ ಕೇಸರೀಕರಣವನ್ನೇ ಸಂಪೂರ್ಣವಾಗಿ ಮುಚ್ಚಿಹಾಕೋಕೆ ಚಿಂತನೆ ನಡೆಸಿದೆ.
ಮೊನ್ನೆಯಷ್ಟೇ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆಯಾಯ್ತು..ಬಿಬಿಎಂಪಿಚುನಾವಣೆ ಸಿದ್ಧತೆ ಕುರಿತಂತೆ ಸಭೆಯಲ್ಲಿಚರ್ಚೆಗಳಾಯ್ತು..ಈ ವೇಳೆ ಬೆಂಗಳೂರು ಭಾಗದ ಜನಪ್ರತಿನಿಧಿಗಳು ಅಧಿಕಾರಕ್ಕೆ ಬರಬೇಕೆಂದ್ರೆ ಕೇಸರೀಕರಣದ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಡ ತಂದ್ರು..ಬಿಜೆಪಿ ಎಲ್ಲದರಲ್ಲೂ ಹಿಂದುತ್ವ,ಕೇಸರೀಕರಣವನ್ನೇ ತುಂಬಿದೆ..ಇದಕ್ಕೆ ಮೊದಲು ಕಡಿವಾಣ ಹಾಕಬೇಕು..ಪಠ್ಯ ಪುಸ್ತಕದ ಪರಿಷ್ಕರಣೆಯಾಗಬೇಕು..ಪಾರ್ಕ್,ಶಾಲಾ ಕೊಠಡಿಗಳ ಮೇಲಿನ ಕೇಸರಿ ಬಣ್ಣವನ್ನ ತೆಗೆಯಬೇಕು..ಪೌರ ಕಾರ್ಮಿಕರ ಸಮವಸ್ತ್ರದ ಮೇಲೂ ಕೇಸರಿ ಹಾಕಿದ್ದಾರೆ..ಇದನ್ನೂ ಕೂಡ ತೆರವು ಮಾಡಬೇಕೆಂದು ಒತ್ತಾಯವನ್ನ ತಂದಿದ್ದಾರೆನ್ನಲಾಗ್ತಿದೆ.. ಅದನ್ನ ನಾಯಕರು ಒಪ್ಪಿಕೊಂಡಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯ ಕೇಸರೀಕರಣದ ವಿರುದ್ಧ ಸರ್ಕಾರ ಸಮರಸಾರಿದಂತೆ ಕಾಣ್ತಿದೆ..ಹಿಂದೆ ಬಿಜೆಪಿ ತಂದಿದ್ದ ಕೆಲವು ವಿಚಾರಗಳ ,ನಿಯಮಗಳಿಗೆ ಬ್ರೇಕ್ ಹಾಕೋಕೆ ಚಿಂತನೆ ಮಾಡಿದೆ.