ಬೆಂಗಳೂರು: ಡಿಸಿಎಂ ಅಧಿಕಾರ ವಹಿಸಿಕೊಳ್ತಿದ್ದಂಗೆ ಡಿಕೆ ಶಿವಕುಮಾರ್ ಬೆಂಗಳೂರನ್ನು ಹೆಚ್ಚು ಕೇಂದ್ರೀಕರಿಸಿ ಕೆಲಸ ಮಾಡುವಂತೆ ತೋರ್ತಿದೆ.ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಕೆಲಸಗಳ ಬಗ್ಗೆ ತಲೆಕೆಡಿಸಿಕೊಂಡಂತಿದೆ.ಫಾರ್ ದಿ ಫಸ್ಟ್ ಟೈಮ್ ಬೆಂಗಳೂರು ರೌಂಡ್ಸ್ ಮಾಡಿದ್ರು.ಬಿಡಿಎ,ಬಿಬಿಎಂಪಿ, ಜಲಮಂಡಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಎಲ್ಲೆಲ್ಲಿ ಸಮಸ್ಯೆ-ವ್ಯತ್ಯಾಸ ಕಂಡುಬಂತೋ ಅಲ್ಲೆಲ್ಲಾ ಮುಲಾಜಿಲ್ದೆ ಅಧಿಕಾರಿಗಳಿಗೆ ಲೆಫ್ಟ್ ರೈಟ್ ತಗಂಡ್ರು..
ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದ್ದಂಗೆ ಅಭಿವೃದ್ದಿ ವಿಚಾರದಲ್ಲಿ ಜಿದ್ದಿಗೆ ಬಿದ್ದು ಕೆಲಸ ಮಾಡುವಂತೆ ತೋರ್ತಿದೆ.ಸಾಕಷ್ಟು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲೋ ಕೆಲಸ ಮಾಡ್ತಿದೆ.ಅದರಲ್ಲು ಬೆಂಗಳೂರನ್ನು ತಳಮಟ್ಟದಲ್ಲಿಅಭಿವೃದ್ದಿ ಪಡಿಸಬೇಕಾದ ಹೊಣೆಗಾರಿಕೆಯನ್ನು ನಿಭಾಯಿಸಲು ಆಡಳಿತ ಯಂತ್ರ ಅಣಿಗೊಳಿಸಲಾಗ್ತಿದೆ.ಮಳೆಗಾಲ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಳೆಹಾನಿಗೆ ತುತ್ತಾಗುವ ಮಹಾದೇವಪುರ ವಲಯ ವ್ಯಾಪ್ತಿ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಯಮಲೂರು ಕೆರೆ,ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.
ಬೆಂಗಳೂರಿನ ನೀರುಗಾಲುವೆಗಳನ್ನು ವೀಕ್ಷಿಸಿದ ನಂತರ ಸುದ್ದಿಗೋಷ್ಟಿ ನಡೆಸಿದ ಡಿಕೆಶಿ,ಒತ್ತುವರಿದಾರರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.ಅವರು ಎಷ್ಟೇ ಪ್ರಭಾವಿಗಳಾದ್ರೂ ತಲೆ ಕೆಡಿಸಿಕೊಳ್ಳೊಲ್ಲ.ಅವರು ಕಾನೂನನ್ನು ಬೇರೆ ರೀತಿಯಲ್ಲಿ ಮಿಸ್ಯೂಸ್ ಮಾಡ್ಕೊಂಡ್ರೆ ನಮಗೂ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಗೊತ್ತಿದೆ.ನಮ್ಮನ್ನು ಯಾಮಾರಿಸ್ಲಿಕ್ಕೆ ಯತ್ನಿಸಿದ್ರೆ ಗ್ರಹಚಾರ ಬಿಡುಸ್ಬಿಡ್ತೇವೆ.ಅಧಿಕಾರಿಗಳಲ್ಲಿ ಯಾರಾದ್ರು ಒತ್ತುವರಿದಾರರಿಗೆ ಸಾಥ್ ಕೊಡುವ ಪ್ರಯತ್ನ ಮಾಡುದ್ರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದ್ರು.
ಮಳೆಗಾಲದ ಭಯದಿಂದ ಬೆಂಗಳೂರನ್ನು ಮುಕ್ತಗೊಳಿಸುವುದು ನಮ್ಮ ಮೊದಲ ಆದ್ಯತೆ.ಇದಕ್ಜಾಗಿ ಎಂಥಾ ರಿಸ್ಕ್ ತೆಗೆದುಕೊಳ್ಳಲು ಸರ್ಕಾರ ಸಿದ್ದವಿದೆ.ಬಿಬಿಎಂಪಿಯನ್ನು ಈ ನಿಟ್ಟಿನಲ್ಲಿ ಸಂಪೂರ್ಣ ಸಜ್ಜುಗೊಳಿಸಲಾಗುತ್ತಿದೆ.ಈ ಬಾರಿಯ ಮಳೆಗಾಲದಲ್ಲಿ ಹೆಚ್ಚು ಪ್ರವಾಹಕ್ಕೆ ಕಾರಣವಾಗುವ ಹಾನಿಗ್ರಸ್ಥ ಪ್ರದೇಶಗಳನ್ನು ಪತ್ತೆ ಮಾಡಿ,ಅಲ್ಲಿ ತ್ವರಿತವಾಗಿ ಆಗಬೇಕಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಸೂಚಿಸಲಾಗಿದೆ ಎಂದರು.
ಒಟ್ನಲ್ಲಿ ಬೆಂಗಳೂರನ್ನು ಮಳೆಗಾಲದಲ್ಲಿ ಸೃಷ್ಟಿಯಾಗುವ ಪ್ರವಾಹದ ಭಯದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಡಿಕೆಶಿ ನಡೆಸಿದ ಸಿಟಿ ರೌಂಡ್ಸ್ ಮಹತ್ವದ್ದೆನಿಸ್ತು.