ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಸದ್ಯ ಸಿನಿಮಾದ ಕೆಲಸಗಳ ಜೊತೆಗೆ ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಿದ್ದಾರೆ. ನಯನ ಹಾಗೂ ವಿಘ್ನೇಶ್ ರ ಮುದ್ದು ಅವಳಿ ಮಕ್ಕಳನ್ನು ನೋಡಬೇಕು ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ನಟಿ ನಯನತಾರಾ ಮಕ್ಕಳ ಜೊತೆ ಚೆಂದದ ಫೋಟೋಶೂಟ್ ಮಾಡಿಸಿದ್ದು, ಅವುಗಳನ್ನು ನಿರ್ದೇಶಕ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.
ನಯನತಾರಾ- ವಿಘ್ನೇಶ್ ಶಿವನ್ ಜೋಡಿ ಜೂನ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನ ಪಡೆದುಕೊಂಡರು. ಇತ್ತೀಚಿಗೆ ನಟಿ ಮಕ್ಕಳಿಗೆ ಉಯಿರ್ ರುದ್ರೋನೀಲ್ ಎನ್.ಶಿವನ್ ಹಾಗೂ ಉಳಗ್ ದೇವಗನ್ ಎನ್.ಶಿವನ್ ಎಂದು ಹೆಸರಿಟ್ಟಿದ್ದಾರೆ.
ಸದ್ಯ ಮಕ್ಕಳ ಜೊತೆ ನಟಿ ನಯನತಾರಾ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಚೆಂದದ ಫೋಟೋವನ್ನ ನಿರ್ದೇಶಕ ವಿಘ್ನೇಶ್ ಶಿವನ್ ಶೇರ್ ಮಾಡಿದ್ದಾರೆ. ನಯನತಾರಾ ಜೊತೆಗಿನ ದಾಂಪತ್ಯಕ್ಕೆ ಒಂದು ವರ್ಷ ತುಂಬಿದ ಸಂತಸದಲ್ಲಿ ನಯನತಾರಾ ಪತಿ ಫೋಟೋಸ್ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಅದೆಷ್ಟೇ ಕಷ್ಟಗಳಿದ್ದರೂ ಮಕ್ಕಳ ಮುಖ ನೋಡಿದಾಗ ಮತ್ತಷ್ಟು ಎನರ್ಜಿ ಬರುತ್ತದೆ. ಖುಷಿಯಾಗುತ್ತದೆ ಎಂದು ನಿರ್ದೇಶಕ ಬರೆದುಕೊಂಡಿದ್ದಾರೆ.