ಬೆಂಗಳೂರು: ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸರಿಂದ ಮೂರು ಪಿಸ್ತೂಲ್ ಹಾಗೂ ಜೀವಂತ ಗುಂಡು ವಶ ಪಡೆದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಿಚಾರಣೆ ವೇಳೆ ಬೆಂಗಳೂರು ಮಾರ್ಗವಾಗಿ ಸಾಗಟವಾಗ್ತಿದ್ದ ಪಿಸ್ತೂಲ್ ಗಳು ನಾಗಲ್ಯಾಂಡ್ ನಿಂದ ಕೇರಳಕ್ಕೆ ರವಾನೆಯಾಗ್ತಿದ್ವು ಎಂದು ಬೆಳಕಿಗೆ ಬಂದಿದ್ದು, ಪೊಲೀಸ್ರ ಎರಡು ವಿಶೇಷ ತಂಡಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಆ ಕುರಿತ ಸ್ಟೋರಿ ಇಲ್ಲಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಿಸ್ತೂಲ್ ಮಾರಾಟಕ್ಕೆ ಯತ್ನಿಸ್ತಿದ್ದ ಕೇರಳ ಮೂಲದ ನೀರಜ್ ಜೋಸೆಫ್ ಎಂಬಾತನನ್ನ ಕಬ್ಬನ್ ಪಾರ್ಕ್ ಪೊಲೀಸ್ರು ಬಂಧಿಸಿದ್ರು. ಆರಂಭದಲ್ಲಿ ಕಂಟ್ರಿಮೇಡ್ ಪಿಸ್ತೂಲ್ ಎಂದು ತಿಳಿದುಕೊಂಡಿದ್ದ ಪಿಸ್ತೂಲ್ ಗಳು ಪಕ್ಕಾ ಪ್ಯಾಕ್ಟರಿ ಮೇಡ್ ಪಿಸ್ತೂಲ್ ಗಳು. 2.2 ಎಂಎಂ ಗುಂಡುಗಳನ್ನ ಹಾರಿಸೋ ಸಾರ್ವಜನಿಕರ ಸೇಫ್ಟೀಗೆ ಬಳಸೋ ಗನ್ ಗಳೆಂದು ಪೊಲೀಸ್ರ ಪರಿಶೀಲನೆಯಿಂದ ತಿಳಿದು ಬಂದಿದೆ.
ಪಿಸ್ತೂಲ್ ಗಳ ಗುಣಮಟ್ಟ ಹಾಗೂ ಅವು ತಯಾರಾಗ್ತಿದ್ದ ಸ್ಥಳ ನಕ್ಸಲ್ ಪೀಡಿತ ಪ್ರದೇಶ ಹಾಗೂ ಸಪ್ಲೈ ಆಗ್ತಿದ್ದ ರಾಜ್ಯ ಪಿಎಫ್ಐ ಆಕ್ಟೀವ್ ಆಗಿರೋ ಸ್ಟೇಟ್ ಆದ್ದರಿಂದ ಪಿಸ್ತೂಲ್ ಪತ್ತೆ ಪ್ರಕರಣವನ್ನ ಕಬ್ಬನ್ ಪಾರ್ಕ್ ಪೊಲೀಸ್ರು ಗಂಭೀರವಾಗಿ ಪರಿಗಣಿಸಿದ್ದಾರೆ. ಆ ಹಿನ್ನೆಲೆ ಎರಡು ಆಯಾಮಗಳಲ್ಲಿ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ. ಒಂದು ಪಿಸ್ತೂಲ್ ಎಲ್ಲಿಂದ ತರಲಾಗಿತ್ತು ಅನ್ನೋದು. ಸಿಕ್ಕಿರುವ ಮಾಹಿತಿ ಪ್ರಕಾರ ನೀರಜ್ ಜೊಸೇಫ್ ನ ಬಿಎಂಡಬ್ಲ್ಯು ಕಾರಿನಲ್ಲಿ ಪತ್ತೆಯಾದ ಪ್ಯಾಕ್ಟರಿ ಮೇಡ್ ಪಿಸ್ತೂಲ್ ಗಳು ನಾಗಲ್ಯಾಂಡ್ ನಿಂದ ಸಪ್ಲೈ ಆಗ್ತಿದ್ವು. ಹೇಳಿ ಕೇಳಿ ಬರ್ಮಾ, ನಾಗಲ್ಯಾಂಡ್ ನಕ್ಸಲ್ ಪ್ರದೇಶವಾಗಿದ್ದು, ಅಲ್ಲಿಂದ ನೀರಜ್ ಜೋಸೆಫ್ ಒಂದು ಪಿಸ್ತೂಲ್ ಗೆ ಎಪತ್ತು ಸಾವಿರ ಹಣ ನೀಡಿ ಖರೀದಿಸ್ತಿದ್ದ ಅನ್ನೋ ಮಾಹಿತಿ ಸಿಕ್ಕಿದೆ.
ಮತ್ತೊಂದೆಡೆ ಪಿಸ್ತೂಲ್ ಯಾರಿಗೆ ನೀಡಲು ತರಲಾಗಿತ್ತು…? ಎಂಬ ಪ್ರಶ್ನೆ ಪೊಲೀಸ್ರ ತಲೆಯಲ್ಲಿ ಕಾಡ್ತಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕೇರಳಕ್ಕೆ ಡೆಲಿವರಿ ನೀಡಲು ತರಲಾಗಿತ್ತೆಂದು ಬೆಳಕಿಗೆ ಬಂದಿದೆ. ಇನ್ನು ಕೇರಳದಲ್ಲಿ ಪಿಎಫ್ಐ ಆಕ್ಟೀವ್ ಆಗಿದ್ದು, ಯಾರಿಗೆ ತಲುಪಿಸ್ತಿದ್ರು ಎಂಬುದು ಪತ್ತೆಯಾಗಿಲ್ಲಾ. ಹೀಗಾಗಿ ಈಗಾಗಲೇ ಕೇರಳಕ್ಕೆ ತೆರಳಿರುವ ಪೊಲೀಸರ ಒಂದು ಟೀಮ್, ಆರೋಪಿಯ ಮೊಬೈಲ್ ನಲ್ಲಿ ಪತ್ತೆಯಾಗಿರೋ ಮೊಬೈಲ್ ನಂಬರ್ ಗಳ ಬೆನ್ನು ಬಿದ್ದಿದ್ದು, ಹುಡುಕಾಟ ನಡೆಸ್ತಿದ್ದಾರೆ.
ಈ ಹಿನ್ನೆಲೆ ಪೊಲೀಸ್ರು ತನಿಖೆಯನ್ನ ಚುರುಕುಗೊಳಿಸಿದ್ದು, 70 ಸಾವಿರ ಬೆಲೆಯ ಪಿಸ್ತೂಲ್ ಸಾಗಾಟಕ್ಕೆ ಬಿಎಂಡಬ್ಲ್ಯೂ ಕಾರನ್ನ ಯೂಸ್ ಮಾಡ್ತಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದ್ದು, ಆರೋಪಿ ನೀರಜ್ ಜೊಸೇಫ್ ನ್ನ ತೀವ್ರ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ.