ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ,ಪಕ್ಷದೊಳಗೆ ಬಿ ಎಲ್ ಸಂತೋಷ್ ವಿರುದ್ಧ ಅಸಮಧಾನ ಸ್ಪೋಟವಾಗಿದೆ. ಬಿ ಎಲ್ ಸಂತೋಷ್ ರಾಜಕೀಯವಾಗಿ ತೀರ್ಮಾನಗಳಿಗೆ ಬಿಜೆಪಿ ಮಕಾಡೆ ಮಲಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕಪಡಿಸಿದ್ದಾರೆ.ನಿನ್ನೆ ನಡೆದ ಬಿಜೆಪಿ ಸೋಲಿನಾ ಪರಾಮರ್ಶೆ ಸಭೆಯಲ್ಲಿ ಬಿ ಎಲ್ ಸಂತೋಷ ವಿರುದ್ಧ ಬಿಜೆಪಿ ನಾಯಕರು ಬೆಂಕಿಯುಗಳಿದ್ದಾರೆ.
ಸೋಲು… ಹತಾಶೆ… ಅಸಮಾಧಾನ.. ನೋವು… ಹೌದು.. ಇದು ಬಿಜೆಪಿ ಪರಾಜಿತ ಅಭ್ಯರ್ಥಿಗಳ ಮುಖದಲ್ಲಿ ಗೋಚರಿಸಿತ್ತು.. ಇತ್ತ ಗೆದ್ದ ಸಂತೋಷದಲ್ಲಿದ್ದರು ಅಧಿಕಾರದಲ್ಲಿ ಇಲ್ಲ ಎಂಬ ಸಂಕಟ ಗೆದ್ದ ಬಿಜೆಪಿ ಶಾಸಕರಲ್ಲಿತ್ತು.. ಈ ಎರಡು ಕ್ಷಣಕ್ಕೆ ಸಾಕ್ಷಿಯಾಗಿದ್ದು ರಾಜ್ಯ ಬಿಜೆಪಿ ಕಚೇರಿ… ಇದರ ಜತೆ ಬಿ ಎಲ್ ಸಂತೋಷ್ ವಿರುದ್ದ ಸಭೆಯಲ್ಲಿ ಸಾಕಷ್ಟು ಅಸಮಾಧಾನ ಹೊರಹಾಕಿದ್ರು..
ಎಲೆಕ್ಷನ್ ಮುಗಿದು ತಿಂಗಳಾಗಿದ್ರು ಬಿಜೆಪಿ ನಾಯಕರು ಆತ್ಮಾವಲೋಕನ ಸಭೆಯೇ ನಡೆಸಿರಲಿಲ್ಲ.. ಸೋಲು ಗೆಲುವಿನ ಲೆಕ್ಕಾಚಾರದ ನಡುವೆ ಕೊನೆಗೂ ಬಿಜೆಪಿ ನಾಯಕರ ಒಗ್ಗೂಡಿಸುವ ಪ್ರಯತ್ನ ಕೂಡ ನಡೀತು.. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸೋತ ಹಾಗೂ ಗೆದ್ದ ನಾಯಕರ ಜೊತೆಗೆ ರಾಜ್ಯ ಬಿಜೆಪಿ ಹಿರಿಯ ನಾಯಕರು ಆತ್ಮಾವಲೋಕನ ಸಭೆ ನಡೆಸಿದರು.. ಸಭೆಯಲ್ಲಿ ಬಿಎಲ್ ಸಂತೋಷ್ ವಿರುದ್ದ ಗುಡುಗಿದ್ರು.. ಸೋಲಿಗೆ ಬಿಎಲ್ ಸಂತೋಷ್ ರವರ ಅತಿಯಾದ ಇಂಟ್ರಾಸ್ಟ್ ಕಾರಣ ಎಂದು ಗುಡುಗಿದ್ರು..
ಒಂದ್ಕಡೆ ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಸರತ್ತು ಜೋರಾಗಿದ್ರೆ, ಮತ್ತೊಂದು ಕಡೆ ಸೋಲಿಗೆ ಅಸಮಾಧಾನವು ಆತ್ಮಾವಲೋಕನದ ಮೂಲಕ ಹೊರ ಬಿದ್ದಿದೆ.. ರಾಜ್ಯ ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರೆ, ಇತ್ತ ಸೋತ ನಾಯಕರು ಸೋಲಿಗೆ ಪರಾಮರ್ಶೆ ಮಾಡಲಾಯಿತು.. ಸಭೆಯಲ್ಲಿ ಪಕ್ಷ ಸಂಘಟನೆಯೇ ಎಲ್ಲದಕ್ಕೂ ಮೂಲ ಮಂತ್ರ ಎಂಬ ಸಂದೇಶ ರವಾನೆ ಮಾಡಿದ್ರು. ಈ ಮೂಲಕ ಮುಂಬರುವ ಚುನಾವಣೆ ಸಿದ್ದತೆಗಳ ಬಗ್ಗೆ ಒಂದಿಷ್ಟು ಸಲಹೆ ಸೂಚನೆಗಳನ್ನು ನೀಡಿದ್ರು..
ಎರಡು ವಿಭಾಗಗಳಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಗೆದ್ದ ನೂತನ ಶಾಸಕರು ಭಾಗಿಯಾದರು. ಬಿಜೆಪಿಯ ಹೀನಾಯ ಸೋಲಿನ ಬಗ್ಗೆ ಗೆದ್ದ ಶಾಸಕರು ಕೂಡ ಒಂದಷ್ಟು ಅಸಮಾಧಾನ ತೋಡಿಕೊಂಡರು. ಆಡಳಿತ ವಿರೋಧಿ ಅಲೆ ಹಾಗೂ ಬಿಜೆಪಿ ಸರ್ಕಾರದ ಮೇಲಿದ್ದ ಒಂದಷ್ಟು ಆರೋಪಗಳೇ ನಮ್ಮ ಸ್ನೇಹಿತರು ಸೋಲಿಗೆ ಕಾರಣವಾಯಿತು ಅಂತ ತಿಳಿಸಿದ್ರು..
ಇನ್ನು ಗೆದ್ದವರು ಸಂತೋಷದಿಂದ ಬಂದು ಅಸಮಾಧಾನದಿಂದಲೇ ಹೊರನಡೆದ್ರೆ, ಇತ್ತ ಪರಾಜಿತ ಅಭ್ಯರ್ಥಿಗಳು ಮಾತ್ರ ಬಿಜೆಪಿ ಕಚೇರಿಗೆ ಸೋಲಿನ ಮೂಟೆಯನ್ನೇ ಹೊತ್ತು ತಂದಿದ್ರು. ಹಿರಿಯ ನಾಯಕರ ಸಮ್ಮುಖದಲ್ಲಿ ಸೋಲಿನ ಕಹಿಯನನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ಅಂತಿಮವಾಗಿ ಸರ್ಕಾರ ಹಾಗೂ ಪಕ್ಷ ತೆಗೆದುಕೊಂಡ ಕೆಲವೊಂದು ನಿರ್ಧಾರದಿಂದಲೇ ಸೋಲಾಯ್ತು ಎಂದು ದೂರಿದ್ರು..
ಒಂದಷ್ಟು ಪರಾಜಿತ ಅಭ್ಯರ್ಥಿಗಳ ನೋವಾಗಿದ್ರೆ, ಮತ್ತೊಂದು ಕಡೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಸಭೆಯಲ್ಲಿ ಸಿಟ್ಟಾಗಿಯೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಲ್ಲಿದ್ದಾಗ ಮೂರು ಬಾರಿ ಗೆದ್ದೆ. ಆದರೆ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿಗೆ ಬಂದು ಇಲ್ಲಿ ಸ್ಪರ್ಧೆ ಮಾಡಿದಾಗ ಎರಡು ಬಾರಿಗೆ ಸೋತಿದ್ದೇನೆ.. ಇತ್ತ ಮಾಜಿ ಸಚಿವ ಸುಧಾಕರ್ ಮೇಲೂ ಸಿಟ್ಟಾಗಿದ ಎಂಟಿಬಿ, ಡಾ.ಸುಧಾಕರ್ ಗೆ ಉಸ್ತುವಾರಿ ನೀಡಿದ್ರು,ಆವರು ಸೋತಿದ್ದಾರೆ, ನಮ್ಮನ್ನೂ ಸೋಲಿಸಿದ್ದಾರೆ ಕೊಟ್ಟ ಜವಾಬ್ದಾರಿಯನ್ನ ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್ ನಿಭಾಯಿಸಲಿಲ್ಲ ಎಂದು ದೂರಿದ್ದಾರೆ..
ಒಟ್ಟಾರೆ ನಿನ್ನೆ ನಡೆದ ಬಿಜೆಪಿಯ ಸಭೆಯಲ್ಲಿ ಅನೇಕರು ಬಹಿರಂಗವಾಗಿಯೇ ಗುಡುಗಿದ್ರು.. ಆದ್ರೆ ಈ ಕೆಲಸವನ್ನ ಮುಂಚೆಯೇ ಸೋತ ಅಭ್ಯರ್ಥಿಗಳು ಮಾಡಿದ್ರೆ ಸೊಲಿನ ಬದಲು ಗೆಲ್ಲುವು ಕಾಣ್ತಿದ್ರೇನೋ ಗೊತ್ತಿಲ್ಲ.. ಒಟ್ನಲ್ಲಿ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು