ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಏಕಾಏಕಿ ಮಳೆಗೆ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ.ಅಡ್ಡಾದಿಡ್ಡಿ ಮಳೆಗೆ ಚಿಂಚೋಳಿ ತಾಲೂಕಿನ ದೇಗುಲಮಡಿ ಸೇತುವೆ ಕೊಚ್ಚಿಹೋಗಿದೆ.
ಮಳೆ ಬಂದ ಪರಿಣಾಮ ದೇಗುಲಮಡಿ ಗ್ರಾಮದ ಸಂಚಾರ ಕಡಿತಗೊಂಡಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು.. ಹೀಗಾಗಿ ಸಂಚಾರಕ್ಕೆ ಅನುವಾಗಲು ಪಕ್ಕದಲ್ಲಿ ಚಿಕ್ಕದೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ವಿಚಿತ್ರ ಅಂದ್ರೆ ಆ ಚಿಕ್ಕ ಸೇತುವೆ ಇದೀಗ ಮಳೆಗೆ ನೆಲಕಚ್ಚಿದೆ.