ಬೆಂಗಳೂರು: ನೀರು.. ನೀರು ಬೆಂಗಳೂರಿನ ಜನ ಹನಿ ನೀರಿಗಾಗಿ ಪರದಾಡಬೇಕಾದ ದಿನ ದೂರವಿಲ್ಲ. ಕೆಲವೇ ಕೆಲವು ದಿನಗಳು ಅಷ್ಟೇ..ಬೆಂಗಳೂರಿನ ಕೊಳಾಯಿಗಳಲ್ಲಿ ಕಾವೇರಿ ಹರಿಯುವುದಿಲ್ಲ.ನಗರದ ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗೋ ಆತಂಕ ಇದೆ..ಹೌದು ಚೆನ್ನೈ ಮಹಾನಗರದ ನಿವಾಸಿಗಳು ಎದುರಿಸುತ್ತಿರುವ ಸಂಕಷ್ಟವನ್ನೇ ಬೆಂಗಳೂರಿನ ಜನ ಎದುರಿಸಬೇಕಾಗಿದೆ.ಯಾಕೆಂದರೆ ಜೀವನದಿ ಕಾವೇರಿ ಬರಿದಾಗುತ್ತಿದ್ದು, ,ಮುಂಗಾರು ತಡವಾದ್ರೆ ರಾಜಧಾನಿಯಲ್ಲಿ ಜಲಕಂಟಕ ಭೀತಿ ಎದುರಾಗಿದೆ.
ಐಟಿ ಸಿಟಿ, ಸಿಲಿಕಾನ್ ವ್ಯಾಲಿ, ಸ್ಟಾರ್ಟ್ ಅಪ್ಗಳ ರಾಜಧಾನಿ ಬೆಂಗಳೂರಿನಲ್ಲಿ ಜಲಕ್ಷಾಮ ಎದುರಾಗುವ ಆತಂಕ ಇದೆ.. ಯಸ್ ..ಚೆನ್ನೈ ನಗರದ ನಿವಾಸಿಗಳು ಎದುರಿಸುತ್ತಿರುವ ಸಂಷಕ್ಟವನ್ನೇ ಬೆಂಗಳೂರಿನ ಜನ ಕೂಡ ಎದುರಿಸುವ ಭೀತಿ ಎದುರಾಗೋ ಮುನ್ಸೂಚನೆ ಸಿಕ್ಕಿದೆ. ಆದರು ಜಲಮಂಡಳಿಯಾಗಲಿ ,ಸರ್ಕಾರವೇ ಆಗಲಿ ಈ ಎಚ್ಚರಿಕೆಯನ್ನ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಇಂಥಾದ್ದೊಂದು ಸಣ್ಣ ನಿರ್ಲಕ್ಷ್ಯದಿಂದಲೇ ಮಹಾನಗರದಲ್ಲಿ ಹಾಹಾಕಾರ ಭೀತಿ ಎದುರಾಗಲಿದೆ. ಜೀವನದಿ ಕಾವೇರಿ ಒಡಲು ಬರಿದಾಗಿದ್ದು, ನೀರಿನ ಕೊರತೆಯನ್ನು ಗಮನದಲ್ಲಿಟ್ಟುಕೊಂಡಿರುವ ಜಲಮಂಡಳಿ ಅಧಿಕಾರಿಗಳು ಇನ್ನು ವಾರಕ್ಕೆ ಒಂದೆರಡು ದಿನ ಮಾತ್ರ ನಗರಕ್ಕೆ ಕಾವೇರಿ ನೀರು ಪೂರೈಸಲು ಚಿಂತನೆ ನಡೆಸಿದ್ದಾರೆ.
ಹೌದು.ಮಳೆಯ ಕೊರತೆಯಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ಸಾಕಷ್ಟು ತಗ್ಗಿದೆ. ಸದ್ಯ ಮಳೆಯಾಗುವ ನಿರೀಕ್ಷೆಯೂ ಕಡಿಮೆ ಇದ್ದು, ನೀರಿನ ಪೂರೈಕೆಯನ್ನು ಈಗಿನಿಂದಲೇ ನಿಯಂತ್ರಿಸಲು ಜಲಮಂಡಳಿ ನಿರ್ಧಾರ ಮಾಡಿದೆ..ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಇಲ್ಲದಿರೋದ್ರಿಂದ ಕೆಆರ್ಎಸ್ ಡ್ಯಾಂ ನೀರಿನ ಮಟ್ಟ ಕುಸಿತ ಉಂಟಾಗಿದೆ. ಐದು ವರ್ಷದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ನೀರಿನ ಮಟ್ಟ ಕುಸಿದಿದೆ. ಬೆಂಗಳೂರು ಮಾತ್ರವಲ್ಲದೆ ಕಾವೇರಿ ನೀರು ಅವಲಂಬಿಸಿರುವ ನಗರಗಳಲ್ಲೂ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆಯಿದ್ದು.124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್ಎಸ್ನಲ್ಲಿ ಸದ್ಯ 82.30 ಅಡಿಯಷ್ಟೇ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 104.07 ಅಡಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 22 ಅಡಿಯಷ್ಟು ನೀರು ಪ್ರಮಾಣ ಕುಸಿತವಾಗಿದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಡ್ಯಾಂನಲ್ಲಿ ಸದ್ಯ 11. ಟಿಎಂಸಿಯಷ್ಟು ನೀರು ಸಂಗ್ರಹ ಇದೆ. 11 ಟಿಎಂಸಿಯಲ್ಲಿ 4 ಟಿಎಂಸಿಯಷ್ಟು ಮಾತ್ರ ನೀರನ್ನ ಬೆಳೆಗೆ ಹಾಗೂ ಕುಡಿಯಲು ಬಳಸಿಕೊಳ್ಳಲು ಸಾಧ್ಯ ಇದೆ.ಹೀಗಾಗಿ ಬೆಂಗಳೂರಿಗೆ ಕಾವೇರಿ ನೀರೇ ಅನಿವಾರ್ಯ ವಾಗಿರೋ ಕಾರಣ ಜಲಮಂಡಳಿ ಆತಂಕ ಹೆಚ್ಚಿಸಿದೆ.
ಕೆಆರ್ಎಸ್ನಲ್ಲಿ ಹಾಲಿ ಇರುವ 11 ಟಿಎಂಸಿ ನೀರಿನಲ್ಲಿ ಮೈಸೂರು, ಮಂಡ್ಯ ಮತ್ತು ಬೆಂಗಳೂರಿಗೆ ಪೂರೈಸಬೇಕಿದೆ. ಒಟ್ಟಾರೆ ನೀರಿನಲ್ಲಿ ಬೆಂಗಳೂರು ನಗರ ಒಂದಕ್ಕೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕು. ಮೈಸೂರಿಗೆ 3 ಹಾಗೂ ಮಂಡ್ಯ, ರಾಮನಗರ ಮತ್ತು ಚಾಮರಾಜನಗರಗಳಿಗೆ 3 ಟಿಎಂಸಿ ನೀರು ಅಗತ್ಯವಿದೆ. ಪರಿಸ್ಥಿತಿ ಗಮನಿಸಿದರೆ ನೀರಿನ ಕೊರತೆ ಕಾಡುವ ಎಲ್ಲಾ ಲಕ್ಷಣಗಳೂ ಎದ್ದು ಕಾಣುತ್ತಿವೆ ಹೀಗಾಗಿ ಜೂನ್ ನಿಂದ್ಲೇ ನೀರಿನ ಹಾಹಾಕಾರ ಶುರುವಾಗಲಿದೆ. .2010ರಲ್ಲಿ ಮಳೆ ಕೊರತೆಯುಂಟಾಗಿ ಕೆಆರ್ಎಸ್ ನೀರಿನ ಪ್ರಮಾಣ ಕುಸಿದಿದ್ದಾಗ ಬೆಂಗಳೂರಿನಲ್ಲಿ ಜಲಮಂಡಳಿ ವಾರದಲ್ಲಿ ಎರಡು ಬಾರಿ ಮಾತ್ರ ನೀರು ಪೂರೈಸುತ್ತಿತ್ತು. ಈಗ ಮತ್ತೆ ಅದೇ ರೀತಿಯ ಪರಿಸ್ಥಿತಿ ಎದುರಾಗುತ್ತಿದ್ದು, ವಾರದಲ್ಲಿಒಂದು ಬಾರಿ ಮಾತ್ರ ನೀರು ಪೂರೈಸುವ ಬಗ್ಗೆ ಚಿಂತನೆ ನಡೆಸಿದೆ.ಒಟ್ಟಿನಲ್ಲಿ ರಾಜಧಾನಿಗೆ ನೀರಿನ ಬವಣೆ ಕೆಲವೇ ದಿನಗಳಲ್ಲಿ ತ ಕಾಡಲಿದೆ. ಇರೋ ನೀರನ್ನ ಮಿತವಾಗಿ ಬಳಸಿದರೆ ಕೊಂಚ ಮಟ್ಟಿಗಾದ್ರೂ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು..