ಬೀದರ್: ಇಂದು ಕಾಂಗ್ರೆಸ್ ಸರ್ಕಾರ ಮೊದಲ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರಿಗೆ ಸಬಲಿಕರಣ ಮಾಡುವ ಈ ಶಕ್ತಿ ಯೋಜನೆಯಾಗಿದೆ. ಕಾರ್ಮಿಕ ವರ್ಗ, ಕೆಲಸ ಕಾರ್ಯಗಳಿಗೆ ತೆರಳುವ ಮಹಿಳೆಯರಿಗೆ ಈ ಯೋಜನೆ ಅನುಕುಲವಾಗಲಿದೆ. ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸಿದ್ದರಾಮಯ್ಯ ಐದು ವರ್ಷ ಪುರ್ಣ ಅವದಿ ಸಿಎಂ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ ಪ್ರಶ್ನೆಯಾಗಿದೆ. 136 ಜನ ಶಾಸಕರು ಗೆದ್ದಿದ್ದಾರೆ. ಈ ಸರ್ಕಾರಕ್ಕೆ ಯಾರಿಂದಲೂ ಅಲಿಗಾಡಿಸಲು ಸಾಧ್ಯವಿಲ್ಲ. ಸರ್ಕಾರ ಯಾವ ರೀತಿ ಆಡಳಿತ ನಿಡುತ್ತಿದೆ ಅನ್ನುವುದು ಪ್ರಮುಖವಾದದ್ದು. ಹಗರಣ ರಹಿತ, ಪಾರದರ್ಶಕ ಆಡಳಿತ ನಿಡುವ ನಮ್ಮ ಸರ್ಕಾರ ಬಂಡೆಯಂತಿದೆ ಎಂದರು.