ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಮುನ್ನ ಪಂಚ ಗ್ಯಾರಂಟಿಗಳನ್ನ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇವತ್ತು ಮೊದಲ ಗ್ಯಾರಂಟಿಯನ್ನ ಜಾರಿ ಮಾಡಿದೆ. ಇವತ್ತು ಮಧ್ಯಾಹ್ನದಿಂದ್ಲೇ ಶಕ್ತಿ ಯೋಜನೆ ಜಾರಿಯಾಗಿದ್ದು, ಮಹಿಳೆಯರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಫ್ರೀಯಾಗಿ ಜರ್ನಿ ಮಾಡ್ತಿದ್ದಾರೆ. ಹಾಗಾದ್ರೆ ಮೊದಲ ದಿನದ ಫ್ರೀ ಬಸ್ ಜರ್ನಿ ಹೇಗಿತ್ತು. ಫಸ್ಟ್ ಡೇ ಬಸ್ ಹತ್ತಿದ್ದ ಲೇಡಿಸ್ ಏನು ಹೇಳಿದ್ರು, ಓಡೋಟ ನಡೆಸೋ ಮಹಿಳೆಯರಿಗೆ ಏನೆಲ್ಲ ರೂಲ್ಸ್ ಫಾಲೋ ಮಾಡಬೇಕು ಅನ್ನೋ ರಿಪೋರ್ಟ್ ಇಲ್ಲಿದೆ.
ಚುನಾವಣೆ ಮುನ್ನ ಪಂಚ ಗ್ಯಾರಂಟಿಗಳನ್ನ ಘೋಷಿಸಿ ಅಧಿಕಾರದ ಗದ್ದಗೆ ಹಿಡಿದ ಕಾಂಗ್ರೆಸ್ ಇವತ್ತು ಮೊದಲ ಗ್ಯಾರಂಟಿ ಪೈಕಿ ಒಂದಾದ ಶಕ್ತಿ ಯೋಜನೆ ಜಾರಿ ಮಾಡಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ಸಿಕ್ಕ ಬೆನ್ನಲ್ಲೇ ಮಹಿಳೆಯರು ಹಣ ನೀಡದೆ ಫ್ರೀ ಟಿಕೆಟ್ ತಕ್ಕೊಂಡು ಓಡಾಟ ನಡೆಸಿದರು.ಮಧ್ಯಾಹ್ನ ಮೆಜೆಸ್ಟಿಕ್ ಕೆಬಿಎಸ್ ಬಸ್ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡದ ಬಳಿಕ ಲಕ್ಷಾಂತರ ಮಹಿಳಾ ಪ್ರಯಾಣಿಕರು ಖುಷಿಯಿಂದ ಬಸ್ ಹತ್ತಿ ಓಡಾಟ ನಡೆಸಿದ್ರು.ಈ ವೇಳೆ ಸರ್ಕಾರದ ನಿರ್ಧಾರವನ್ನ ಸ್ವಾಗತಿಸಿದ್ರು.
ಇನ್ನೂ ಸರ್ಕಾರ ಶಕ್ತಿ ಯೋಜನೆಗೆ ಹಲವು ಷರತ್ತುಗಳನ್ನ ವಿಧಿಸಿದೆ.ಬಿಎಂಟಿಸಿ, ಕೆಎಸ್ಆರ್ಟಿಸಿ ಬಿಎಂಟಿಸಿ, ವಾಯುವ್ಯ, ಹಾಗೂ ಕಲ್ಯಾಣ ಕರ್ನಾಟಕದ ಬಸ್ ಗಳಲ್ಲಿ ಸ್ಟಿಕ್ಕರ್ ಹಾಕಿರೋ ಬಸ್ ಗಳಲ್ಲಿ ಮಾತ್ರ ಫೀ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ರಾಜ್ಯದೊಳಗಿನ ಪ್ರಯಾಣಿಕರಿಗೆ ಮಾತ್ರ ಉಚಿತ ಪ್ರಯಾಣ ಅವಕಾಶ ಮಾಡಿಕೊಟ್ಟಿದೆ ರಾಜಹಂಸ, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್ಗಳು ಇ.ವಿ. ಪವರ್ ಪ್ಲಸ್ಗೆ ಇದು ಅನ್ವಯಿಸಲ್ಲ.
ಬಿಎಂಟಿಸಿ ಹೊರತುಪಡಿಸಿ ಉಳಿದೆಲ್ಲಾ ಸಾರಿಗೆ ಸಂಸ್ಥೆಗಳಲ್ಲಿ ಶೇಕಡಾ 50% ಆಸನಗಳು ಪುರುಷರಿಗೆ ಮೀಸಲಿಡಲಾಗಿದೆ. ಶಕ್ತಿ ಕಾರ್ಡ್ ದತ್ತಾಂಶ ಆಧರಿಸಿ ಉಚಿತ ಪ್ರಯಾಣದ ವೆಚ್ಚವನ್ನ ಸಾರಿಗೆ ನಿಗಮಗಳಿಗೆ ಸರ್ಕಾರವೇ ಭರಿಸುತ್ತೆ. ಎಲ್ಲಾ ಮಹಿಳೆಯರಿಗೂ ಮೂರು ತಿಂಗಳೊಳಗೆ ಸೇವಾ ಸಿಂಧು ಮೂಲಕ ಅರ್ಜಿ ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಇಂದಿನಿಂದ ಸರ್ಕಾರ ನೀಡಿರುವ ಯಾವುದಾದರೊಂದು ಗುರುತಿನ ಚೀಟಿ ಪರಿಗಣಿಸಿ ಉಚಿತ ಪ್ರಯಾಣ ಟಿಕೆಟ್ ನೀಡಲಾಗುತ್ತದೆ. ಶೂನ್ಯ ಟಿಕೆಟ್ ವಿತರಿಸುವ ಮುನ್ನ ಗುರುತಿನ ಚೀಟಿ ಪರಿಶೀಲಿಸಬೇಕಾಗಿದೆ..
ಒಟ್ಟಾರೆ ನುಡಿದಂತೆ ನಡೆಯುತ್ತೇವೆ ಎಂದಿದ್ದ ಕಾಂಗ್ರೆಸ್, ಕೊಟ್ಟಿರೋ ಪಂಚ ಗ್ಯಾರಂಟಿಯಲ್ಲಿ ಶಕ್ತಿ ಯೋಜನೆಯನ್ನ ಮೊದಲು ಜಾರಿ ಮಾಡಿದೆ. ಈ ಮೂಲಕ ಇಂದಿನಿಂದಲೇ ಮಹಿಳೆಯರು ಫ್ರೀಯಾಗಿ ಸರ್ಕಾರದ ನಾನ್ ಲಕ್ಸುರಿ ಬಸ್ಗಳಲ್ಲಿ ಫುಲ್ ಖುಷ್ ಆಗಿ ಸಂಚರಿಸುತ್ತಿದ್ದಾರೆ. ಆದ್ರೆ ಈ ಯೋಜನೆ ಅದೆಷ್ಟು ದಿನ ಮುಂದುವರೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.