ಬೆಂಗಳೂರು: ಶಕ್ತಿ ಯೋಜನೆಯನ್ನು ಮತ್ತಷ್ಟು ಸರಳೀಕೃತ ಮಾಡಿದ ಸರ್ಕಾರ.ಫ್ರೀ ಬಸ್ ಸಂಚಾರಕ್ಕೆ ಮೂಲ ಗುರುತಿನ ಚೀಟಿ ಕಡ್ಡಾಯ ಇಲ್ಲ ಇನ್ಮೇಲೆ ಐಡಿ ಕಾರ್ಡ್ ನಕಲಿ ಪ್ರತಿಯನ್ನ ತೋರಿಸಿ ಪ್ರಯಾಣ ಮಾಡಬಹುದು.
ಹಾರ್ಡ್ ಅಥವಾ ಸಾಫ್ಟ್ ಕಾಪಿ ಹಾಜರಿ ಪಡಿಸಿ ಟಿಕೆಟ್ ಪಡೆಯಲು ಅವಕಾಶ ಈ ಮೊದಲು ಮೂಲ ಗುರುತಿನ ಚೀಟಿ ಕಡ್ಡಾಯ ಎಂದಿದ್ದ ಸಾರಿಗೆ ನಿಗಮಗಳು. ಇದೀಗ ಮತ್ತಷ್ಟು ಸರಳೀಕೃತ ಗೊಳಿಸಿ ಆದೇಶ ಹೊರಡಿಸಿದ ಕೆಎಸ್ಆರ್ಟಿಸಿ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ. ಶಕ್ತಿ ಯೋಜನೆ(Free Bus Travel For Women Scheme) ಎರಡನೇ ದಿನಕ್ಕೆ ಕಾಲಿಟ್ಟು ಮಹಿಳೆಯರು, ಯುವತಿಯರು, ವಿದ್ಯಾರ್ಥಿಗಳು ಹಣ ಖರ್ಚು ಮಾಡದೆ ಓಡಾಡುತ್ತಿದ್ದಾರೆ. ಬಹುತೇಕ ಕೆಎಸ್ಆರ್ಟಿಸಿ, ಸರ್ಕಾರಿ ಬಸ್ಗಳು ಫುಲ್ ಆಗಿದ್ದು ಖಾಸಗಿ ಬಸ್ಗಳು ಖಾಲಿ ಖಾಲಿಯಾಗಿವೆ. ಸರ್ಕಾರದ ಫ್ರೀ ಬಸ್ ಯೋಜನೆಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.