ಬೀಜಿಂಗ್: ಸುದ್ದಿ ವರದಿ ಮಾಡುತ್ತಿದ್ದ ಕೊನೆಯ ಭಾರತದ ಪತ್ರಕರ್ತನಿಗೆ ದೇಶವನ್ನು ತೊರೆಯುವಂತೆ ಚೀನಾ ಸೂಚನೆ ನೀಡಿದೆ.
ಕೋವಿಡ್ 19 ಬಳಿಕ ವಿದೇಶಿ ಪತ್ರಕರ್ತರಿಗೆ ನಿರ್ಬಂಧ ವಿಧಿಸಿದ್ದರೂ ಚೀನಾದಲ್ಲಿ ಭಾರತದ ಮಾಧ್ಯಮಗಳು ಕೆಲಸ ಮಾಡುತ್ತಿದ್ದವು. ಪ್ರಸಾರ ಭಾರತಿಯ ಇಬ್ಬರು ಮತ್ತು ಹಿಂದೂ ಪತ್ರಿಕೆಯ ವರದಿಗಾರರ ವೀಸಾವನ್ನು ಈ ವರ್ಷದ ಏಪ್ರಿಲ್ನಲ್ಲಿ ಚೀನಾ ನವೀಕರಿಸಿರಲಿಲ್ಲ. ಈಗ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ವರದಿಗಾರನಿಗೆ ದೇಶವನ್ನು ತೊರೆಯುವಂತೆ ಸೂಚಿಸಿದೆ.
ಚೀನಾದಲ್ಲಿ ವಾಕ್ ಸ್ವಾತಂತ್ರ್ಯ ಇಲ್ಲ ಎನ್ನುವುದು ಗೊತ್ತಿರುವ ವಿಚಾರ. ಸರ್ಕಾರದ ಎಡವಟ್ಟುಗಳು ವಿಶ್ವಕ್ಕೆ ತಿಳಿಯಬಾರದು ಎಂದು ಬಹಳ ಮಾಧ್ಯಮಗಳಿಗೆ ಷರತ್ತು ವಿಧಿಸುತ್ತದೆ. ಅಲ್ಲಿನ ಪ್ರಜೆಗಳಿಗೆ ಭಾರತ ಸುದ್ದಿ ವೆಬ್ಸೈಟ್ ವೀಕ್ಷಣೆಯ ಸ್ವಾತಂತ್ರ್ಯವೂ ಇಲ್ಲದಾಗಿದೆ. ಭಾರತದ ಸುದ್ದಿ ಮಾಧ್ಯಮಗಳ ವೆಬ್ಸೈಟ್ಗಳ ಮೇಲೆ ಚೀನಿ ಸರ್ಕಾರ ಈ ಹಿಂದೆಯೇ ಸೆನ್ಸಾರ್ ಕತ್ತರಿ ಪ್ರಯೋಗಿಸಿತ್ತು.
ಚೀನಾದ ಮಂದಿ ವಿಪಿಎನ್ ಸರ್ವರ್ ಮೂಲಕ ಭಾರತದ ವೆಬ್ಸೈಟ್ಗಳನ್ನು ನೋಡುತ್ತಿದ್ದರು. ಭಾರತದ ವಾಹಿನಿಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಇದಕ್ಕೂ ಚೀನಾ ಕತ್ತರಿ ಹಾಕುವಲ್ಲಿ ಯಶಸ್ವಿಯಾಗಿತ್ತು.