ಬೆಂಗಳೂರು: ಮುಖ್ಯಮಂತ್ರಿ, ಡಿಸಿಎಂ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ನಗರದಲ್ಲಿ ನಡೆದಿರುವ ಒತ್ತುವರಿಗಳನ್ನು ತೆರವು ಮಾಡಲು ಮುಂದಾಗಿದ್ದು, ಈ ಸಂಬಂದ ಇಂದು ಮಹತ್ವದ ಸಭೆ ಕರೆಯಲಾಗಿದೆ. ಬಿಬಿಎಂಪಿ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ದಯಾನಂದ ನೇತೃತ್ವದಲ್ಲಿ ಬಿಬಿಎಂಪಿ ಎಸ್ಡಬ್ಲ್ಯುಡಿ ಇಂಜಿನಿಯರ್ಸ್, ಸರ್ವೆ ಅಧಿಕಾರಿ, ತಹಶೀಲ್ದಾರ್ ಅವರ ಸಭೆ ನಡೆಯಲಿದೆ
ಇಂದು ರಾಜಕಾಲುವೆ ಒತ್ತುವರಿ ತೆರುವು ಸಂಬಂಧ ಮಹತ್ವದ ಸಭೆ ನಡೆಯಲಿದ್ದು, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎಸ್ಡಬ್ಲ್ಯುಡಿ ಇಂಜಿನಿಯರ್ಸ್, ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ, ಸರ್ವೇ ಆಫಿಸರ್ಸ್, ಬೆಂಗಳೂರು ನಗರ ತಹಸೀಲ್ದಾರ್ಸ್ ಸಭೆಯಲ್ಲಿರಲಿದ್ದಾರೆ. ಸರ್ವೇ ಕಾರ್ಯ ಮುಗಿದಿದ್ದು ಸದ್ಯದಲ್ಲೇ ಒತ್ತುವರಿ ಮಾರ್ಕಿಂಗ್ ಕಾರ್ಯ ಶುರುವಾಗಲಿದೆ ಎಂದು ತಿಳಿಸಿದ್ದಾರೆ.