ಬೆಂಗಳೂರು: ತಾಯಿನೇ ದೇವರು, ತಾಯಿನೇ ಎಲ್ಲಾ . ಆ ತಾಯಿ ಪ್ರೀತಿಗಾಗಿ ಎಷ್ಟೋ ಜನ ಹಪಹಪಿಸುತ್ತಾರೆ ಆದ್ರೆ ಇಲ್ಲೊಬ್ವಾಕೆ ತನ್ನ ಹೆತ್ತ ತಾಯುಯನ್ನ ಕೊಂದು ಸೂಟ್ ಕೇಸ್ ನಲ್ಲಿ ಶವ ಪ್ಯಾಕ್ ಮಾಡಿ ಸೀದಾ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಮಾಸ್ಟರ್ ಆಫ್ ಪಿಸಿಯೋ ಥೆರಪಿ ಮಾಡಿರೋ ಸೇನಾಲಿ ಸೇನ್ ಅನ್ನೋ 39ವರ್ಷದ ಮಹಿಳೆ ತನ್ನ 70ವರ್ಷ ತಾಯಿ ಬೀವಾ ಪಾಲ್ ನ ಕೊಲೆ ಮಾಡಿದ್ದಾಳೆ. ಇದಕ್ಕೆ ಕಾರಣ ಸೇನಾಲಿ ಅತ್ತೆ ಮತ್ತು ಅಮ್ಮನ ಜಗಳವಂತೆ. ಒಂದೆ ಮನೆಯಲ್ಲಿದ್ದ ಬೀಗರ ಜಗಳಕ್ಕೆ ಬೇಸತ್ತು ಬೀವಾ ಪೌಲ್ ಮಗಳಿಗೆ ನಿದ್ದೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾಳೆ. ಮಗಳು ಅಮ್ಮನಿಗೆ ಇಂದು ಮುಂಜಾನೆ 20 ಮಾತ್ರೆಗಳನ್ನ ನುಂಗಿಸಿದ್ದಾಳೆ.
ನಂತರ ಸುಮಾರು11 ಗಂಟೆಗೆ ತಾಯಿ ಹೊಟ್ಟೆ ನೋವು ಅಂದಾಗ ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ ನಿಂದ ಕುತ್ತಿಗೆ ಜೀರಿದ್ದಾಳೆ. ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿಯನ್ನ ಪ್ಯಾಕ್ ಮಾಡಿ ತಂದೆ ಫೋಟೋ ಜೊತೆಗೆಗಿಟ್ಟು ಸೀದಾ ಮೈಕೋ ಲೇಔಟ್ ಠಾಣೆಗೆ ಬಂದಿದ್ದಾಳೆ.
ಬಿಳಕಹಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನ ಪ್ಲಾಟ್ ನಿಂದ ಆಟೋದಲ್ಲಿ ಠಾಣೆಗೆ ಬಂದುಶವದ ಸಮೇತ ಶರಣಾಗಿದ್ದಾಳೆ.ಮಗಳ ಕೃತ್ಯಕ್ಕೆ ಪೊಲೀಸ್ರು ಶಾಕ್ ಆಗಿದ್ದು ಕೇಸ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.