ಮೈಸೂರು: ಹುಣಸೂರು ತಾಲ್ಲೂಕಿನ ಕರಿ ಮಾರಮ್ಮ ದೇವಾಲಯದ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಶವದ ಎಡಗೈಯಲ್ಲಿ ಸಾಯಿಕುಮಾರ್ ಹಾಗೂ ಬಲಗೈಯಲ್ಲಿ ಎಸ್ಜಿ ಗೀತಾ ಎಂದು ಹಚ್ಚೆ ಗುರುತು ಇದೆ. ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬಿಳಿಗೆರೆಯುಳ್ಳ ಶರ್ಟ್ ಧರಿಸಿರುವ ವ್ಯಕ್ತಿಯ ಮೃತ ದೇಹದ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.