ಹುಬ್ಬಳ್ಳಿ: ಸಾಲದ ಭಾದೆಗೆ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ. ಸಾಲದ ಸುಳಿ ಸಿಲುಕಿ ಕೃಷಿ ಹೊಂಡಕ್ಕೆ ಹಾರಿ ರೈತ ಶಿವಪುತ್ರಪ್ಪ ಫಕ್ಕೀರಪ್ಪ ಗಡಾದ ವಯಾ (63) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದು,
ಲಾವಣಿ ಜಮೀನನ್ನು ಸಾಗುವಳಿ ಮಾಡಲು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಈ ವರ್ಷ ಸರಿಯಾಗಿ ಮಳೆ ಬೆಳೆ ಆಗದಿರುವ ಕಾರಣ ಮಾಡಿದ ಮನನೊಂದು ಕೃಷಿ ಹೊಂಡಕ್ಕೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.