ಗದಗ:- ಕರ್ನಾಟಕ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಚಾಲನೆ ನೀಡಿದರು. ಉಚಿತ ಪ್ರಯಾಣ ಹಿನ್ನೆಲೆ ಪ್ರಯಾಣಿಕರು ಕಿಕ್ಕಿರಿದು ಬಸ್ಸಿನಲ್ಲಿ ತುಂಬಿರುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅದರಂತೆ ಪ್ರಯಾಣಿಕರನ್ನು ಹೆಚ್ಚು ಲೋಡ್ ಮಾಡಿಕೊಂಡು ಹೋದ ಸರ್ಕಾರಿ ಬಸ್ ಒಂದು ಮಾರ್ಗ ಮಧ್ಯೆದಲ್ಲೇ ಕೆಟ್ಟು ನಿಂತಿದೆ.
ಹೌದು ಗದಗ ನಗರದ ಮಹಿಳಾ ಕಾಲೇಜ್ ಬಳಿ ಈ ಘಟನೆ ಜರುಗಿದೆ. ಪಾಟಾ ಕಟ್ ಆಗಿದ್ದರಿಂದ ಪ್ರಯಾಣಿಕರ ಪರದಾಟ ಹೇಳತ್ತಿರದ್ದಾಗಿತ್ತು. ಇನ್ನೂ ಉಚಿತ ಬಸ್ ಪ್ರಯಾಣ ಹಿನ್ನೆಲೆ, ಬಸ್ ನಲ್ಲಿ ಮಹಿಳಾ ಪ್ರಯಾಣಿಕರೇ ತುಂಬಿ ತುಳುಕುತ್ಕಿದ್ದರು ಎಂದು ತಿಳಿದು ಬಂದಿದೆ.
ಇನ್ನೂ ಕೆಟ್ಟು ನಿಂತ ಬಸ್, ಗದಗ ಡಿಪೋಗೆ ಸೇರಿದ್ದಾಗಿದ್ದು, ಗದಗದಿಂದ ಗಜೇಂದ್ರಗಡಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿತ್ತು. ಇನ್ನೂ ಮಾರ್ ಮಧ್ಯೆಯೇ ಬಸ್ ಕೆಟ್ಟಿದ್ದು, ಊರು ತಲುಪೋದು ಹೇಗೆ ಅಂತ ಪ್ರಯಾಣಿಕರು ಪರದಾಡಿದ ದೃಶ್ಯ ಕಂಡು ಬಂತು. ಕೆಲ ಹೊತ್ತಿನ ನಂತರ ಬೇರೊಂದು ಬಸ್ ಗೆ ಪ್ರಯಾಣಿಕರ ವರ್ಗಾವಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಡಿಪೋದಲ್ಲಿ ಇಂತಹ ಸಾಕಷ್ಟು ಡಕೋಟಾ ಬಸ್ ಗಳಿದ್ದು, ಶಕ್ತಿ ಯೋಜನೆ ಯಶಸ್ಸಿಗೆ ಹೊಸ ಬಸ್ ಗಳನ್ನ ಬಿಡಿ ಅಂತ ಮಹಿಳೆಯರು ಒತ್ತಾಯ ಮಾಡಿದ್ದಾರೆ.