ತುಮಕೂರು:- ಜಿಲ್ಲೆಯ ತಿಪಟೂರು ಸೋಮವಾರ ಸಂಜೆ ಸುರಿದ ಕೆಲವೇ ಗಂಟೆಗಳ ಮಳೆಯ ಅಬ್ಬರಕ್ಕೆ ಅಕ್ಷರಕ್ಷಃ ಪತರುಗುಟ್ಟಿದೆ. ನೂತನ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದ್ದರೆ, ಮಳೆಯಲ್ಲಿ ಕೊಚ್ಚಿ ಹೋಗಿರೋ.. ವಾಹನಗಳು, ಮನೆಯ ಒಳಗೆ ನುಗ್ಗಿರೋ ನೀರು ಜನರನ್ನು ಪರದಾಡುವಂತೆ ಮಾಡಿತು.
Video Player
ಮತ್ತೊಂದೆಡೆ ತಿಪಟೂರಿನ ಗಾಂಧಿ ನಗರದ ಬಳಿಯ ಅಂಡರ್ ಪಾಸ್ ಬಳಿ ಲಘು ಭೂಕುಸಿತವೇ ಆಗಿದೆ. ಇದಕ್ಕೆ ಕಾರಣ ಅಂಡರ್ ಪಾಸ್ ನಲ್ಲಿ ತುಂಬಿದ 10 ಅಡಿಗೂ ಹೆಚ್ಚಿನ ಆಳಕ್ಕೆ ಮಳೆ ನೀರು ತುಂಬಿರೋದು. ಜೆಸಿಬಿಯಿಂದ ಕಾರ್ಯಾಚರಣೆಗೆ ರೇಲ್ವೆ ಇಲಾಖೆ ಮುಂದಾಗಿತ್ತು. ಪರಿಣಾಮ ನಿಜಾಮುದ್ದಿನ್ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲು ಸಂಚಾರವನ್ನೇ ತಾತ್ಕಾಲಿಕ ಸ್ಥಗಿತಗೊಳಿಸಿದೆ.