ಗದಗ ; ಹೈವೇಯಲ್ಲಿನ ವಿದ್ಯುತ್ ಕಂಬ ಸ್ಪರ್ಶದಿಂದ 6ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಜನತಾ ಕಾಲೋನಿಯಲ್ಲಿ ಜರುಗಿದೆ. ಪಂಕಜ್ ರಾಮು ಕಲಾಲ್ (12) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಮೃತ ಬಾಲಕ ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡ್ತಿದ್ದ ಕೂಲಿಕಾರ್ಮಿಕನ ಓರ್ವನೇ ಸುಪುತ್ರ ಎಂದು ಹೇಳಲಾಗಿದ್ದು, ಮಗನ ಸಾವು ನೋಡಲಾಗದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲೆಯಿಂದ ಬಂದು ಆಟವಾಡಲು ಹೋಗುತ್ತಿದ್ದಾಗ ಹೈವೇ ಕ್ರಾಸ್ ಮಾಡುವಾಗ ವಿದ್ಯುತ್ ಕಂಬ ಸ್ಪರ್ಶವಾಗಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.
ಇನ್ನೂ ಮಗನ ಸಾವು ಖಂಡಿಸಿ ಹೈವೇ ತಡೆದು ಶವ ಸಮೇತ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.