ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಚಾರವಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಗಂಭೀರ ಚರ್ಚೆ ನಡೆಸಿದ್ದಾರೆ. ಸುರ್ಜೇವಾಲ ಅವರು ಬೆಂಗಳೂರು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದಿದ್ದು. ಈ ವೇಳೆ ‘ಈಗ ಒಳ್ಳೆಯ ವಾತಾವರಣ ಪಕ್ಷದ ಪರವಾಗಿ ಇದೆ.
ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಮಾಡುವುದು ಒಳ್ಳೆಯದು. ಸರ್ಕಾರ ನಮ್ಮದೆ ಇರುವುದರಿಂದ ಕಾನೂನು ತೊಡಕುಗಳನ್ನು ಬೇಗ ಸರಿಪಡಿಸಬೇಕು. ಮೀಸಲಾತಿ ಮತ್ತು ವಾರ್ಡ್ ಮರು ವಿಂಗಡಣೆ ಕಾನೂನು ತೊಡಕು ನಿವಾರಣೆ ಆಗಬೇಕು.
ಈ ಮೊದಲೇ ಬಿಜೆಪಿ ಮಾಡಿದ ವಾರ್ಡ್ ವಿಂಗಡಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇವು. ಬಿಜೆಪಿಯವರು ಮತ ವಿಭಜನೆ ವಿಚಾರವಾಗಿ ತಾರತಮ್ಯ ಮಾಡಿ, ಅವರಿಗೆ ಅನುಕೂಲ ಆಗುವ ಹಾಗೆ ವಿಂಗಡಣೆ ಮಾಡಿದ್ದಾರೆ.
ಹಾಗಾಗಿ ವಾರ್ಡ್ ಮರು ವಿಂಗಡಣೆ ಆಗಲೇಬೇಕು ಜೊತೆಗೆ ಪಾಲಿಕೆಯನ್ನು ಕೂಡ ವಿಂಗಡಣೆ ಮಾಡುವುದರೊಂದಿಗೆ ಬಿ ಎಸ್ ಪಾಟೀಲ್ ಸಮಿತಿ ಕೊಡುವ ವರದಿ ಒಪ್ಪಿಕೊಳ್ಳಬೇಕು ಎಂದು ಬೆಂಗಳೂರು ಕಾಂಗ್ರೆಸ್ ಶಾಸಕರು ಸುರ್ಜೇವಾಲ ಮತ್ತು ಡಿಕೆಶಿಗೆ ಸಲಹೆ ಕೊಟ್ಟಿದ್ದಾರೆ.