ಮಂಗಳೂರು: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್ ಆದೇಶ ವಿಚಾರ ‘ ನನಗೆ ಸೇರಿದ್ದ 150 ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ 80ಕ್ಕೂ ಅಧಿಕ ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥದ ಬಳಿಕ ಪರಿಹಾರವಾಗಲಿದೆ ಎಂದು ಧರ್ಮಸ್ಥಳದಲ್ಲಿ ಕೆಆರ್ಪಿಪಿ ಸ್ಥಾಪಕ, ಶಾಸಕ ಜನಾರ್ದನರೆಡ್ಡಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಾತನಾಡಿದ ಅವರು ‘ನನ್ನ ಮೇಲೆ ದೇವರು ಮತ್ತು ಮಂಜುನಾಥ ಸ್ವಾಮಿಯ ಕೃಪೆ ಇದೆ. ನ್ಯಾಯದ ಮೇಲೆ ನನಗೆ ಮೊದಲಿನಿಂದಲೂ ನಂಬಿಕೆ ಇತ್ತು. ಮಂಜುನಾಥನ ಆಶೀರ್ವಾದದಿಂದ 80ಕ್ಕೂ ಹೆಚ್ಚು ಆಸ್ತಿ ವಾಪಸ್ ಬಂದಿದೆ. 2009ರ ಪೂರ್ವದಲ್ಲಿ ನನ್ನ ಆಸ್ತಿಗಳನ್ನು ಸಿಬಿಐ ಜಪ್ತಿ ಮಾಡಿತ್ತು. ಆಗ ಜಪ್ತಿಯಾಗಿದ್ದ 80ಕ್ಕೂ ಹೆಚ್ಚು ಆಸ್ತಿಗಳನ್ನು ಬಿಡುಗಡೆ ಮಾಡಿದೆ ಎಂದರು.