ಬೆಂಗಳೂರು: ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಸಭೆ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಇವರು ವಸೂಲಿಗೆ ಬಂದಿರೋದು, ಜನ ಉದ್ದಾರ ಮಾಡೋದಿಕ್ಕೆ ಬಂದಿಲ್ಲ. ಈ ರಾಷ್ಟ್ರೀಯ ಪಕ್ಷಗಳು ಕರ್ನಾಟಕದ ಸಂಪತ್ತನ್ನು ಯಾವ ರೀತಿ ಲೂಟಿ ಮಾಡ್ತಿದ್ದಾರೆ ಗೊತ್ತಾಗ್ತಿದೆ. ಯಾವುದೇ ಸೂಚನೆ ಇದ್ದರೆ ಕಾಂಗ್ರೆಸ್ ಕಚೇರಿ ಒಳಗೆ ಸಭೆ ಮಾಡ್ಕೊಳಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ಕೊಡೋದಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ. ಅವರಿಗೆ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ. ನಿನ್ನೆ ಅವರು ಸಭೆ ನಡೆಸುವ ಫೋಟೋ ಹೊರಬಂದಿದೆ. ಅವರ ಮಂತ್ರಿಗಳೇ ಅದನ್ನು ಹೊರಗೆ ಬಿಟ್ಟಿದ್ದಾರೆ. ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳ್ತಾರೆ ಅನ್ನೊದಕ್ಕೆ ಇದೇ ಸಾಕ್ಷಿ. ಅವರು ಹೇಳ್ತಾರೆ ಅದ್ಯಾವುದೋ ಶಾಂಗ್ರೀಲಾ ಹೋಟೆಲ್ನಲ್ಲಿ ಇವರು ಇದ್ದರಂತೆ. ಇವರನ್ನು ಕರೆದುಕೊಂಡು ಹೋಗೋದಕ್ಕೆ ಅಧಿಕಾರಿಗಳು ಬಂದ್ರಂತೆ. ಯಾವುದೇ ಸಭೆ ಮಾಡಿಲ್ಲ ಅಂತ ಹೇಳ್ತಾವ್ರೆ ಎಂದರು.