ಬೆಂಗಳೂರು:- ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಸೋಲಿನ ಶಾಕ್ ನಿಂದ ಇನ್ನೂ ಬಿಜೆಪಿ ಹೊರ ಬಂದಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆ ನಡೆದು ಒಂದು ತಿಂಗಳ ನಂತರವೂ ಬಿಜೆಪಿ ಸೋಲಿನ ಶಾಕ್ ನಿಂದ ಹೊರಬಂದಿಲ್ಲ, ಒಂದು ವರ್ಷ ಕಳೆದರೂ ಹೊರಬರುವುದಿಲ್ಲ ಆ ಮಟ್ಟಿಗೆ ಶಾಕ್ ಹೊಡೆದಿದೆ. ನಂತರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಹುದೊಡ್ಡ ಶಾಕ್ ಹೊಡೆಯಲಿದೆ.
ಇದರ ಮುನ್ಸೂಚನೆ ಅರಿತೇ ಪ್ರತಾಪ್ ಸಿಂಹ ರೋಧನೆ ಶುರುವಾಗಿದೆ. ಈ ಶೋಕಾಚರಣೆ ಇನ್ಮುಂದೆ ಬಿಜೆಪಿಗೆ ನಿರಂತರವಾಗಿರಲಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟಾಂಗ್ ನೀಡಿದೆ.
ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ ಬಿಜೆಪಿ ? ರಮೇಶ್ ಜಿಗಜಣಗಿ ಹೇಳಿದಂತೆ, ಯಾರನ್ನು ನೇಣಿಗೆ ಹಾಕುವಿರಿ, ಯಾರ ಕಾಲು ಕಡಿಯುವಿರಿ? ಜೋಶಿ, ಸಂತೋಷ್ ತಲೆಮರೆಸಿಕೊಂಡಿರುವುದು ನೇಣಿನ ಭಯಕ್ಕೋ, ಕಾಲು ಕಡಿಯುವ ಭಯಕ್ಕೋ? ಅಂದಹಾಗೆ ನಿಮ್ಮ ‘ಚಾಣಕ್ಯ’ ಎಲ್ಲಿ, ಪತ್ತೆಯೇ ಇಲ್ಲವಲ್ಲ? ಎಂದು ಪ್ರಶ್ನಿಸಿದೆ.
ಶಕ್ತಿ ಯೋಜನೆ ಜಾರಿಯಾದ ಎರಡನೇ ದಿನ 41 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಮಹಿಳೆಯರ ಸ್ವಾವಲಂಬನೆಗೆ, ಸ್ವಾಭಿಮಾನದ ಬದುಕಿಗೆ ಈ ಯೋಜನೆ ಕ್ರಾಂತಿಕಾರಕ ಬೆಂಬಲ ನೀಡಲಿದೆ. ಕಾಂಗ್ರೆಸ್ ನ ಚಿಂತನೆ, ಯೋಜನೆಗಳು ಸದಾ ಜನಪರವಾಗಿರುತ್ತವೆ ಎಂದು ತಿಳಿಸಿದೆ.