ಲಕ್ನೋ: ವಿವಾಹ ಮಂಟಪದಲ್ಲಿ ವರ, ವಧುವಿನ ಕೊರಳಿಗೆ ಮಾಲೆಯನ್ನು ಹಾಕುವ ಮೊದಲು ವರದಕ್ಷಿಣಿಗೆ ಬೇಡಿಕೆ ಇಟ್ಟಿದ್ದ, ಇದರಿಂದ ವಧುವಿನ ಪೋಷಕರು ಆಘಾತಕ್ಕೊಳಗಾಗಿದ್ದರು. ಬಳಿಕ ವರನನ್ನು ಮರಕ್ಕೆ ಕಟ್ಟಿಹಾಕಿ ಒತ್ತೆಯಾಳನ್ನಾಗಿ ಇರಿಸಿಕೊಂಡ ಘಟನೆ ಉತ್ತರಪ್ರದೇಶದ ಪ್ರತಾಪ್ ಗಢದಲ್ಲಿ ನಡೆದಿದೆ.. ಎರಡೂ ಕಡೆಯವರು ಒಪ್ಪಂದಕ್ಕೆ ಬರಲಾಗದೇ ಜಗಳಕ್ಕಿಳಿದಿದ್ದಾರೆ. ಪೋಲೀಸರು ಪ್ರವೇಶಿಸುವ ತನಕವೂ “ವರೋಪಚಾರ” ಮಾಡಿಸಿಕೊಳ್ಳುತ್ತ ಮರಕ್ಕಂಟಿಕೊಂಡು ನಿಂತಿದ್ದನಂತೆ ಈ ಭೂಪತಿ ಗಂಡು.
ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋನಲ್ಲಿ ವರನ ಸುತ್ತ ಹಗ್ಗ ಬಿಗಿದು ಗಂಟುಹಾಕುತ್ತಿರುವುದನ್ನು ಕಾಣಬಹುದು. ಈ ಪ್ರಸಂಗವನ್ನು ಮೊದಲೇ ಊಹಿಸಿ ಹಗ್ಗದ ಕಟ್ಟನ್ನು ತಂದಿಟ್ಟುಕೊಂಡಿದ್ದರೋ ಎನ್ನಿಸುವಂತಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಧೋರಣೆಯಲ್ಲಿ ಸಾಲಂಕೃತ ವರ ತಲೆಯೆತ್ತಿ ಸ್ಥಿತಪ್ರಜ್ಞತೆಯಿಂದ ನಿಂತಿದ್ದಾನೆ. “ಈ ಮುಸುಡಿಗೆ ಹೆಣ್ಣು ಸಿಕ್ಕಿದ್ದೇ ಹೆಚ್ಚು, ವರದಕ್ಷಿಣೆ ಬೇರೆ ಕೇಡು,” ಎಂದಿದ್ದಾರೆ ಕೆಲವರು. “ಎರಡೂ ಪಕ್ಷದ ಮಂದಿ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರು ರಾಜಿಯಾಗಿ ಯಾವುದೇ ಒಪ್ಪಂದಕ್ಕೆ ಬಂದಿಲ್ಲ.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा#pratapgarh pic.twitter.com/OtqTdzNj5A
— Rahul Sisodia (@Sisodia19Rahul) June 15, 2023
ಇನ್ನೂ ಮಂತ್ರಾಲೋಚನೆ ನಡೆದಿದೆ,” ಎಂದು ಪೋಲೀಸರು ತಿಳಿಸಿದ್ದಾರೆ.“ವರನ ಗೆಳೆಯರು ಕೆಟ್ಟದಾಗಿ ವರ್ತಿಸುತ್ತಿದ್ದರು. ಇದರಿಂದ ಜಗಳ ಶುರುವಾಯಿತು. ಇದರ ನಡುವೆಯೇ ಇವನು ವರದಕ್ಷಿಣೆ ಬೇರೆ ಕೇಳತೊಡಗಿದ. ಇದರಿಂದ ಕುಪಿತರಾದ ವಧುವಿನ ಕಡೆಯವರು ಅವನನ್ನು ಕಟ್ಟಿಹಾಕಿದರು,” ಎಂದೂ ಕೆಲವರು ಹೇಳುತ್ತಿದ್ದಾರೆ. ಇದು “ತಾಲೀಬಾನೀ ಶಿಕ್ಷೆ” ಎಂದು ಒಕ್ಕಣೆಯಿರುವ ಟ್ವೀಟ್ ಒಂದು ಹರಿದಾಡುತ್ತಿದೆ. ಇದೇನು ಮದುವೆಯೋ ಬೀದಿ ಕಾಳಗವೋ ತಿಳಿಯದೇ ಗೊಂದಲದಿಂದ ಹಣೆ ಚಚ್ಚಿಕೊಳ್ಳಬೇಕಷ್ಟೇ