ಲಕ್ನೋ: ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ (Shirtless) ಧರಿಸದೇ ಸಭೆಗೆ ಹಾಜರಾಗಿ ಫಜೀತಿಗೆ ಒಳಗಾಗಿದ್ದಾರೆ. ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಮಹಾನಿರ್ದೇಶಕ ವಿಜಯ್ ಕಿರಣ್ ಆನಂದ್, ವಿವಿಧ ಜಿಲ್ಲೆಗಳಲ್ಲಿ ನಿಯೋಜನೆ ಗೊಂಡಿರುವ ಅಧಿಕಾರಿಗಳೊಂದಿಗೆ ಇಲಾಖಾ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆದಿದ್ದರು. ಈ ಸಭೆಗೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಶರ್ಟ್ ಹಾಕದೆ, ಬನಿಯನ್ ಧರಿಸಿ ಬಂದಿದ್ದರು.
ಇದನ್ನು ಗಮನಿಸಿದ ವಿಜಯ್ ಕಿರಣ್ ಆನಂದ್ (Vijay Kiran Anand) ಅವರು ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಸಭೆಗೆ ಹಾಜರಾಗಿರುವುದನ್ನು ಅನುಚಿತ ವರ್ತನೆ ಎಂದು ಪರಿಗಣಿಸಿ ಕೆಲಸದಿಂದ ಅಮಾನತು ಮಾಡಲಾಗಿದೆ. ಈ ವೇಳೆ ಅಧಿಕಾರಿ ಬನಿಯನ್ ಧರಿಸಿ ಹಾಜರಾಗಿರುವುದು ಎಲ್ಲರ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಹೀಗಾಗಿ ಅವರು ಅಮಾನತುಗೊಂಡಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಆದರೆ ಅಮಾನತುಗೊಂಡಿರುವ ಅಧಿಕಾರಿ ಯಾವ ಜಿಲ್ಲೆಯವರು ಎಂಬುದು ಬಹಿರಂಗವಾಗಿಲ್ಲ.