ಚೆನ್ನೈ: ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಎಂ.ಕೆ ಸ್ಟಾಲಿನ್ (MK Stalin) ವಿರುದ್ಧ ಇದೀಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕಿಡಿಕಾರಿದ್ದಾರೆ. ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ ಸಿಎಂಗೆ ಸವಾಲೊಂದನ್ನು ಎಸೆದಿದ್ದಾರೆ. ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನು ಟಚ್ ಮಾಡಿ ನೋಡಿ.. ನೀವೇನು ಕೊಟ್ಟಿದ್ದೀರೋ ಅದು ನಿಮಗೆ ವಾಪಸ್ ಆಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಹಿಂದೆ ಕನಿಮೋಳಿ ಬಂಧನವಾದಾಗಲೂ ಸ್ಟಾಲಿನ್ ಇಷ್ಟೊಂದು ಆಕ್ರೋಶಿತರಾಗಿಲ್ಲ. ಸೇಂಥಿಲ್ ಡಿಎಂಕೆ ಪಕ್ಷದ ಖಜಾಂಚಿ ಎಂದು ಜನ ಹೇಳುತ್ತಿದ್ದಾರೆ. ಬೆದರಿಕೆಯ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ತಮ್ಮ ಲಿಮಿಟ್ ದಾಟುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುತ್ತೇವೆ ಎಂದು ನಂಬಿದ್ದೀರಾ..?. ಹಾಗಾದ್ರೆ ನಮ್ಮಲ್ಲಿ ಯಾರಾದ್ರೂ ಒಬ್ಬರನ್ನು ಟಚ್ ಮಾಡಿ. ನೀವೇನು ಕೊಟ್ಟಿದ್ದೀರೋ ಅದನ್ನು ನೀವು ಮರಳಿ ಪಡೆಯುತ್ತೀರಿ ನೆನಪಿರಲಿ ಎಂದು ಅಣ್ಣಾಮಲೈ (Annamalai) ವಾಗ್ದಾಳಿ ನಡೆಸಿದ್ದಾರೆ.