ಲಂಡನ್: ಇಂದು IIIನೇ ಕಿಂಗ್ ಚಾರ್ಲ್ಸ್ ಎರಡು ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದು, ಒಂದು ಅವರ ಸಾಂಪ್ರದಾಯಕವಾಗಿ ಹುಟ್ಟಿದ ದಿನಾಂಕದ ಆಧಾರದಲ್ಲಿ, ಇನ್ನೊಂದು ಬ್ರಿಟಿಷ್ ರಾಜಮನೆತನದ ಪ್ರಕಾರ ನಡೆಯುವ ಹುಟ್ಟು ಹಬ್ಬವಾಗಿದೆ
ಟ್ರೂಪಿಂಗ್ ದಿ ಕಲರ್ ಪ್ರಕಾರ ಬ್ರಿಟಿಷ್ ಸಾರ್ವಭೌಮದಂತೆ ಅಧಿಕೃತ ಜನ್ಮದಿನವನ್ನು ಇಂದು ಆಚರಣೆ ಮಾಡಿಕೊಳ್ಳುತ್ತಿದ್ದಾರೆ, ಇದರ ಭಾಗವಾಗಿ ವಾರ್ಷಿಕ ಮಿಲಿಟರಿ ಮೆರವಣಿಗೆ ನಡೆಯುತ್ತಿದ್ದು, ಕಿಂಗ್ ಚಾರ್ಲ್ಸ್ III ಕುದುರೆಯ ಮೇಲೆ ಏರಿ ಸೈನ್ಯದ ಸಂಚಲನವನ್ನು ಪರಿಶೀಲಿಸುತ್ತಾರೆ.
ರೆಜಿಮೆಂಟಲ್ ನಿಖರತೆ ಮತ್ತು ವರ್ಣರಂಜಿತ ಪ್ರದರ್ಶನಗಳು 74 ವರ್ಷ ವಯಸ್ಸಿನ ಚಾರ್ಲ್ಸ್ ಆಳ್ವಿಕೆಯಲ್ಲಿ ಮೊದಲನೆಯ ಹುಟ್ಟುಹಬ್ಬದ ವಿಶೇಷತೆಯಾಗಿದೆ. 1986ರಲ್ಲಿ ಅವರ ತಾಯಿ ರಾಣಿ ಎಲಿಜಬೆತ್ IIರ ನಂತರ ಮೊದಲ ಬಾರಿಗೆ ಆಡಳಿತ ರಾಜನಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಿದ್ದಾರೆ. ಚಾರ್ಲ್ಸ್ ಅವರ ಹುಟ್ಟಿದ ದಿನಾಂಕ ಪ್ರಕಾರ ನೋಡದ್ದರೆ ನವೆಂಬರ್ 14ರಂದು ಆದರೆ ಬ್ರಿಟಿಷ್ ಸಾರ್ವಭೌಮದ ಪ್ರಕಾರ ಎರಡು ಬಾರಿ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಒಮ್ಮೆ ಖಾಸಗಿಯಾಗಿ ಮತ್ತು ಮತ್ತೊಮ್ಮೆ ಸಾರ್ವಜನಿಕವಾಗಿ ತಮ್ಮ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುತ್ತಾರೆ.
1748ರಲ್ಲಿ ಕಿಂಗ್ ಜಾರ್ಜ್ IIರ ನೇತೃತ್ವದಲ್ಲಿ ಜೂನ್ನಲ್ಲಿ ಈ ಮೆರವಣಿಗೆ ಸಂಪ್ರದಾಯವಾಗಿ ಪ್ರಾರಂಭವಾಯಿತು, ಇದು ರಾಜ ಮನೆತನ ಮತ್ತು ಜನರ ನಡುವೆ ಒಂದು ಉತ್ತಮ ಬೇಸಿಗೆಯಾಗಿತ್ತು. ಈ ಕಾರಣಕ್ಕೆ ರಾಜ ಅಥವಾ ರಾಣಿ ಈ ದೇಶದ ಜನರ ಜತೆಗೆ ಬೆರೆಯಲು ಈ ರೀತಿಯ ಆಚರಣೆಗಳನ್ನು ತಂದಿದ್ದರು.
ಈ ಕಾರ್ಯಕ್ರಮ ದೂರದರ್ಶನದಲ್ಲಿ ಬೆಳಿಗ್ಗೆ 10:00 ರಿಂದ ಪ್ರಸಾರವಾಗುತ್ತಿದ್ದು, ಬಕಿಂಗ್ಹ್ಯಾಮ್ ಅರಮನೆಯಿಂದ ಮಧ್ಯ ಲಂಡನ್ನಲ್ಲಿರುವ ಹಾರ್ಸ್ ಗಾರ್ಡ್ಸ್ ಪರೇಡ್ವರೆಗೆ ಈ ಮೆರೆವಣಿಗೆ ನಡೆಯಲಿದೆ. ಸುಮಾರು 1,400 ಸೈನಿಕರು, 400 ಸಂಗೀತಗಾರರು ಮತ್ತು 200 ಕುದುರೆಗಳು ಭಾಗವಹಿಸುತ್ತಿವೆ, 10 ವರ್ಷದ ಶೈರ್ ಮೇರ್ ಜುನೋ ನೇತೃತ್ವದಲ್ಲಿ ಮೂರು ಇತರ ಡ್ರಮ್ ಹಾರ್ಸ್ಗಳು, ಪರ್ಸೀಯಸ್, ಅಟ್ಲಾಸ್ ಮತ್ತು ಅಪೊಲೊಗಳು ಭಾಗವಹಿಸಲಿದೆ.
ಡ್ರಮ್ ಹಾರ್ಸಸ್ ಸೈನ್ಯದಲ್ಲಿ ಅತ್ಯಂತ ಹಿರಿಯ ಪ್ರಾಣಿಗಳು ಮತ್ತು ಪ್ರಮುಖ ಶ್ರೇಣಿಯ ಜೀವಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ, ಇದು ಕೂಡ ಈ ಕಾರ್ಯಕ್ರಮದಲ್ಲಿ ಪ್ರಮುಖ ಭಾಗವಾಗಲಿದೆ. ತಮ್ಮ ಸೈನಿಕರನ್ನು ಯುದ್ಧದಲ್ಲಿ ಗುರುತಿಸಲು ಅನುವು ಮಾಡಿಕೊಡಲು ವಿವಿಧ ರೆಜಿಮೆಂಟ್ಗಳ ಧ್ವಜಗಳ ಗುರುತಿಸಲು ನೃತ್ಯ ಪ್ರದರ್ಶನಗಳು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯರು ಕೂಡ ಭಾಗಿಯಾಗುತ್ತಿದ್ದಾರೆ. ಕಿಂಗ್ ಚಾರ್ಲ್ಸ್ III ಹುಟ್ಟು ಹಬ್ಬಕ್ಕೆ 40 ಕ್ಕೂ ಹೆಚ್ಚು ಭಾರತೀಯ ಭಾಗಿಯಾಗುತ್ತಿದ್ದಾರೆ. ಆದರೆ ಈ ಬಾರಿ ತುಂಬಾ ವಿಶೇಷವಾಗಿದೆ. ವೈದ್ಯರು, ವ್ಯಾಪಾರ ನಾಯಕರು ಮತ್ತು ಸಮುದಾಯ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಬ್ರಿಟಿಷ್ ಸರ್ಕಾರ ತಿಳಿಸಿದೆ. ಕೋವಿಡ್ -19 ಸಮಯದಲ್ಲಿ ಜಗತ್ತಿಗೆ ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ನೀಡಿ ಸಹಾಯ ಮಾಡಿದ ಭಾರತವನ್ನು ಈ ಸಮಯದಲ್ಲಿ ಗೌರವಿಸುತ್ತಿದೆ. ಒಟ್ಟು 1,171 ಜನರು ಬ್ರಿಟಿಷ್ ರಾಜ ಮನೆತನದ ಗೌರವವನ್ನು ಪಡೆಯಲಿದ್ದಾರೆ. ಅನೇಕ ಸಾಹಿತಿಗಳಿಗೆ ಹಾಗೂ ಸಿನಿಮಾ ನಟ, ನಟಿಯರಿಗೆ, ನಿರ್ದೇಶಕರಿಗೆ ಗೌರವ ನೀಡಲಿದ್ದಾರೆ. ವಿಶೇಷವಾಗಿ ಭಾರತೀಯರಾದ ಮಹಿಳಾ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸೇವೆಗಳಿಗಾಗಿ ಸಲಹೆಗಾರ ಪ್ರಸೂತಿ ತಜ್ಞ ಮತ್ತು ಸ್ತ್ರೀರೋಗತಜ್ಞ ಅಂಜು ಕುಮಾರ್ಗೆ ಕೂಡ ಬ್ರಿಟಿಷ್ ಗೌರವ ನೀಡಲಾಗುತ್ತಿದೆ.