ಕೆಆರ್ ಪುರ ;– ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಒತ್ತುವರಿ ತೆರವು ಶುರುವಾಗಲಿದೆ. ಅದರಂತೆ ಬೆಂಗಳೂರಿನ ಕೆ.ಆರ್.ಪುರ ಕ್ಷೇತ್ರದ ಹೊರಮಾವು ವಾರ್ಡನ ಹೊಯ್ಸಳನಗರದಲ್ಲಿ ಹೀಗಾಗಲೇ ಒತ್ತುವರಿ ತೆರವು ಮಾಡಲಾಗಿದೆ. ಮೂರು ಅಂಗಡಿ ಶೆಡ್ ಗಳ ತೆರವು ಕಾರ್ಯಚರಣೆ ನಡೆಸಲಾಗಿದ್ದು, 500ಮೀಟರ್ ಒತ್ತುವರಿ ತೆರವು ಮಾಡಲಾಗಿದೆ.
ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅಂಗಡಿ ಮಾಲೀಕರಿಗೆ ಅವಕಾಶ ನೀಡಲಾಗಿದ್ದು, ತೆರವಿನ ನಂತರ ಮುಂದಿನ ದಿನಗಳಲ್ಲಿ ರಾಜಕಾಲುವೆ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತದೆ. ಇನ್ನೂ ಬೆಂಗಳೂರಿನ ಹೊಯ್ಸಳನಗರದಲ್ಲಿ ಮನೆ ಮಾಲೀಕರಿಗೆ ಸಮಯಾವಕಾಶ ನೀಡಲಾಗಿದ್ದು, ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ಮುಂದುವರಿ ಮಾಡಲಾಗುತ್ತದೆ.
ಇನ್ನೂ ಆಮೆಗತಿಯಲ್ಲಿ ಸಾಗುತ್ತಿದ್ದ ರಾಜಕಾಲುವೆ ಒತ್ತುವರಿ ತೆರವು ಚುರುಕುಗೊಳಿಸಲು ಅಧಿಕಾರಿಗಳಿಗೆ ಕಮಿಷನರ್ 15 ದಿನ ಗಡುವು ಕೊಟ್ಟಿದ್ದಾರೆ. ಕಳೆದ ವರ್ಷ ಮಳೆಯಿಂದಾಗಿ ಭಾಗಶಃ ಬೆಂಗಳೂರು ಮುಳುಗಡೆಯಾಗಿತ್ತು. ಮನೆಗಳಲ್ಲಿ ನೀರು ಹೊಕ್ಕು ನಿವಾಸಿಗರು ಪರದಾಡಿದ್ದರು. ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದರು. ಕೆಲವು ಬಡಾವಣೆಗಳು ಅಕ್ಷರಶಃ ಕೆರೆಯಂತಾಗಿದ್ದವು. ಈ ಸಮಸ್ಯೆಗೆ ರಾಜಕಾಲುವೆ ಒತ್ತುವರಿಯೂ ಒಂದು ಕಾರಣವಾಗಿದೆ.