ಬೆಂಗಳೂರು:– ಬಿಜೆಪಿ ಹಗರಣಗಳ ತನಿಖೆಯ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಹಗರಣಗಳ ಕುರಿತು ಯಾವ ತಂಡಗಳಿಗೆ ತನಿಖೆಗೆ ಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರದಲ್ಲಿ ತೀರ್ಮಾನ ಆಗ್ತಿದೆ. ಬೇರೆ ಬೇರೆ ರೀತಿಯ ಹಗರಣಗಳು ಇವೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸೈಬರ್ ಎಕ್ಸ್ಪರ್ಟ್ ತಂಡ ಬೇಕು. ಕೆಲವು ಕಡೆ ಎಸ್ಐಟಿ ತನಿಖೆ ಮಾಡಲಾಗುವುದು. ಕೆಲವು ಇಲಾಖಾವಾರು ತನಿಖೆ ಆಗುತ್ತೆ. ಕೆಲವೊಂದು ನ್ಯಾಯಾಂಗ ತನಿಖೆ ಆಗುತ್ತೆ. ಯಾವ್ಯಾವ ಹಗರಣ ಯಾವ ರೀತಿಯಲ್ಲಿ ಮಾಡಿದ್ದಾರೆ. ಆ ರೀತಿಯಲ್ಲಿ ತನಿಖೆ ಆಗುತ್ತದೆ” ಎಂದರು.
ನಾವು ಜನರಿಗೆ ಗ್ಯಾರಂಟಿ ಕೊಟ್ಟಿದ್ವಿ, ತನಿಖೆ ಮಾಡುಸುತ್ತೇವೆ. ಅದಕ್ಕೆ ನಾವು ಬದ್ಧ. ಬಿಟ್ ಕಾಯಿನ್ ತನಿಖೆ, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹಗರಣ, ಕೊರೊನಾ ಸಮಯದ ಭ್ರಷ್ಟಾಚಾರ, ಹೆಣದ ಮೇಲೆ ಹಣ ಮಾಡಿದ್ದು, ಈ ಎಲ್ಲ ವಿಚಾರಗಳನ್ನು ತನಿಖೆ ಮಾಡಿಸುತ್ತೇವೆ. ನಾವೇ ಹಿಂದೆ ಒತ್ತಾಯ ಮಾಡಿದ್ವಿ. ಜನ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ನಡೆಸುಕೊಳ್ಳುತ್ತೇವೆ” ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಯೋಜನೆಯಡಿ ಸಾವಿರಾರು ಕೋಟಿ ಅಕ್ರಮ ಆಗಿದೆ. ಇದು ಇಲಾಖಾವಾರು ತನಿಖೆ ನಡಿತಾ ಇದೆ. ಉನ್ನತ ಅಧಿಕಾರಗಳನ್ನು ತನಿಖಾ ತಂಡಕ್ಕೆ ನೇಮಕ ಮಾಡ್ತಾ ಇದ್ದೇವೆ. ಹಂತ ಹಂತವಾಗಿ ತನಿಖೆ ಮಾಡಿಕೊಂಡು ಹೋಗ್ತೇವೆ” ಎಂದರು.