ಬೆಂಗಳೂರು:– ಕಲಬುರ್ಗಿಯಲ್ಲಿ ಮರಳು ಮಾಫಿಯಾಗೆ ಹೆಡ್ ಕಾನ್ಸ್ ಟೇಬಲ್ ಬಲಿ ಪ್ರಕರಣಕ್ಕೆ ಸಂಬಂಧಿಸಿದಂಕೆ ಗೃಹ ಸಚಿವ ಜಿ ಪರಮೇಶ್ವರ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಹೆಡ್ ಕಾನ್ಸ್ ಟೇಬಲ್ ಚೌಹಾಣ್ ಎಂಬುವವರನ್ನು ಮರಳು ಮಾಫಿಯಾ ತಡೆಯಲು ಮುಂದಾಗಿದ್ದ ವೇಳೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಮರಳು ಮಾಫಿಯಾಗೆ ಹೆಡ್ ಕಾನ್ಸ್ ಟೇಬಲ್ ಬಲಿ ಪ್ರಕರಣವನ್ನು ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವರು ಆದೇಶ ನೀಡಿದ್ದಾರೆ. ಅಲ್ಲದೇ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.