ಬೆಂಗಳೂರು:- ಅಕ್ಕಿ ಕೊಡಲ್ಲವೆಂದರೆ ನಮ್ಮ ತೆರಿಗೆ ವಾಪಸ್ಸು ಕೊಡಿ ಎಂದು ಕೇಂದ್ರದ ವಿರುದ್ಧ ಶಾಸಕ ಶಿವಲಿಂಗೇಗೌಡ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸುವುದಿಲ್ಲ. ಬಡವರಿಗೆ 10 ಕೆ.ಜಿ ಅಕ್ಕಿ ಕೊಟ್ಟೆ ಕೊಡುತ್ತೇವೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹೀಗೆ ಬಡವಿರೋಧಿ ಧೋರಣೆ ಮುಂದುವರೆಸಿದರೆ, ಲೋಕಾಸಭೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತಿಳಿಸಿದರು.
‘ಅಲ್ಲದೆ, ಕೇಂದ್ರ ಸರಕಾರವೂ ರಾತ್ರಿ ಅಕ್ಕಿ ಕೊಡುತ್ತೇವೆಂದು ಹೇಳಿ, ಬೆಳಗ್ಗೆ ಅಕ್ಕಿ ಇಲ್ಲ ಎಂದಿದೆ. ಇವರು ನಮ್ಮಿಂದ ತೆರಿಗೆ ತೆಗೆದುಕೊಳ್ಳುವುದಿಲ್ಲವೇ?. ಹಾಗಾದರೆ ನಮ್ಮ ತೆರಿಗೆ ವಾಪಸ್ಸು ನೀಡಿ’ ಎಂದ ಅವರು, ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದ್ದು, ಯಾರೂ ಹಸಿವಿನಿಂದ ಇರಬಾರದೆಂರು.ಆದರೂ ಈಗ ಅಕ್ಕಿ ಇಲ್ಲವೆಂದರೆ ಹೇಗೆ?’ ಎಂದು ಪ್ರಶ್ನಿಸಿದರು.
ಕೇಂದ್ರ ಸರಕಾರದಿಂದ ನಾವೂ ಅಕ್ಕಿ ಉಚಿತವಾಗಿ ಕೊಡಿ ಎಂದು ಕೇಳುತ್ತಿಲ್ಲ, ಬದಲಾಗಿ, ದರ ಪಾವತಿ ಮಾಡುತ್ತೇವೆ. ಒಂದು ವೇಳೆ ಹೀಗೆ, ನಡೆದುಕೊಂಡರೆ ಲೋಕಸಭೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಎಚ್ಚರಿಸಿದ್ದಾರೆ.