ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷ ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಸಭೆ ಆರಂಭವಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆರಂಭವಾಗಿದ್ದು, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಸಲಹೆ ಪಡೆಯಲು ಡಿಸಿಎಂ ಡಿಕೆಶಿ ಸಭೆ ಕರೆದಿದ್ದಾರೆ.
ಬೆಂಗಳೂರು ಸಂಸದರು, ಶಾಸಕರು, ಬಿಬಿಎಂಪಿ, ಬಿಡಿಎ, ಬಿಎಮ್ ಆರ್ ಸಿಎಲ್, ಬೆಂಗಳೂರು ಟ್ರಾಫಿಕ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಇನ್ಫೋಸಿಸ್ನ ಕ್ರಿಸ್ ಗೋಪಾಲಕೃಷ್ಣ, ಆರ್.ವಿ.ಇಸ್ಟಿಟ್ಯೂಟ್ ನ ಎಂಪಿ ಶ್ಯಾಮ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜೂದಾರ್ ಷಾ, ವಂಡರ್ ಲಾ ಎಂಡಿ ಅರುಣ್, ನ್ಯಾಷನಲ್ ಲಾ ಸ್ಕೂಲ್ ನ ಸುಧೀರ್ ಕೃಷ್ಣಮೂರ್ತಿ, ಕಿರ್ಲೋಸ್ಕರ್ ಎಂಡಿ ಗೀತಾಂಜಲಿ ಕಿಲೋಸ್ಕರ್, ಬಿ ಪ್ಯಾಕ್ ಸಂಸ್ಥೆ ಸಿಇಓ ರೇವತಿ ಅಶೋಕ್, FICCI ಚೇರ್ಮನ್ ಉಲ್ಲಾಸ್ ಕಾಮತ್ , ಕೂ ಆಪ್ ಕೋ ಪೌಂಡರ್ ಅಪ್ರಮೇಯ ರಾಮಕೃಷ್ಣ, ಬಾಗ್ಮನೆ ಟೆಕ್ ಪಾರ್ಕ್ ಸಂಸ್ಥಾಪಕ ರಾಜಾ ಬಾಗ್ಮನೆ, ಬ್ರಿಗೇಡ್ ಗ್ರೂಪ್ ಎಂಡಿ, ಜೈ ಶಂಕರ್, ಎಂಬೆಸಿ ಗ್ರೂಪ್ ಸಿಇಓ ಜಿತೇಂದ್ರ, ಮಾಜಿ ಕ್ರಿಕೆಟೆರ್ ಬ್ರಿಜೇಶ್ ಪಟೇಲ್ ಸೇರಿ ಹಕವು ಕ್ಷೇತ್ರದ ಗಣ್ಯರು ಸಭೆಯಲ್ಲಿ ಭಾಗಿಯಾಗಿದ್ದಾರೆ.