ಬೆಂಗಳೂರು: ವಿಧಾನಸಭೆ ಸೋಲಿನ ನಂತ್ರ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೊಟಗೊಂಡಿದೆ.. ಬಿಎಸ್ ವೈ ಹಾಗೂ ಬಿ.ಎಲ್.ಸಂತೋಷ್ ನಡುವಿನ ಹಳೆಯ ಕೋಲ್ಡ್ ವಾರ್ ಬಿರುಸು ಪಡೆದಿದೆ..ಸಂಸದ ಪ್ರತಾಪ್ ಸಿಂಹ ಹೇಳಿಕೆಯ ನಂತರ ಬಣರಾಜಕೀಯ ಶುರುವಾಗಿದೆ.. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿಯ ವಿರುದ್ಧ ಬಿಎಸ್ ವೈ ಆಪ್ತ ಬಳಗ ಸಿಡಿದು ನಿಂತಿದೆ.. ಶೀಘ್ರದಲ್ಲೇ ವರಿಷ್ಠರಿಗೆ ದೂರು ನೀಡಲು ಮುಂದಾಗಿದೆ.. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.. ವಿಧಾನಸಭೆಯ ಸೋಲಿನ ನಂತ್ರ ನಾಯಕರು ಒಳಗೊಳಗೆ ಕತ್ತಿಮಸೆಯೋಕೆ ಶುರುಮಾಡಿದ್ದಾರೆ..
ಸಂಸದ ಪ್ರತಾಪ್ ಸಿಂಹ ಹೊಡೆದ ಮಾತಿನ ಗುಂಡು ಮಾಜಿ ಸಿಎಂ ಬಿಎಸ್ ವೈ ಹಾಗೂ ಅವರ ಶಿಷ್ಯ ಬೊಮ್ಮಾಯಿಯವರ ಎದೆಗೆ ಬಿದ್ದಿದೆ.. ಹೀಗಾಗಿ ಲಿಂಗಾಯತ ವರ್ಸಸ್ ಸಂಘಪರಿವಾರ ಎಂಬ ಹೊಸ ಬೀಜ ಕಾದಟ ಆರಂಭವಾಗಿದೆ.. ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕಾರಣದಿಂದಾಗಿಯೇ ಸೋಲಾಯ್ತು ಅನ್ನೋದನ್ನ ಯಡಿಯೂರಪ್ಪ ಹಾಗೂ ಬೊಮ್ಮಾಯಿ ತಲೆಗೆ ಕಟ್ಟೋಕೆ ಸಂತೋಷ್ ಬಣ ಪ್ರಯತ್ನ ನಡೆಸಿದೆ.. ಹಾಗಾಗಿಯೇ ಅದಕ್ಕೆ ಪ್ರತಾಪ್ ಸಿಂಹ,ಸಿ.ಟಿ.ರವಿಯಂತವರನ್ನ ಬಳಸಿಕೊಳ್ಳಲಾಗ್ತಿದೆ ಎಂಬ ಚರ್ಚೆಗಳು ಶುರುವಾಗಿವೆ.. ಹಾಗಾಗಿ ಬಿಎಸ್ ವೈ ಬಣ ಇದೀಗ ತಿರುಗಿಬಿದ್ದಿದೆ..
ಇನ್ನು ಹೊಂದಾಣಿಕೆ ರಾಜಕಾರಣದಿಂದ ಸೋಲಾಯ್ತು ಅನ್ನೋ ಪ್ರತಾಪ್ ಸಿಂಹ ಹೇಳಿಕೆಯಿಂದ ಮಾಜಿ ಸಿಎಂಗಳಿಬ್ಬರು ಕೆರಳಿ ಕೆಂಡವಾಗಿದ್ದಾರೆ.. ಪಕ್ಷದೊಳಗೆಯೇ ನಮ್ಮನ್ನ ರಾಜಕೀಯವಾಗಿ ಮುಗಿಸೋಕೆ ಹೊರಟಿದ್ದಾರೆಂದು ಬೇಸರಗೊಂಡಿದ್ದಾರೆ.. ಚುನಾವಣೆಯಲ್ಲಿ ನಮ್ಮ ಸಲಹೆಗಳನ್ನ ಕೇಳದೆ, ತಮಗಿಷ್ಟ ಬಂದಂತೆ ನಿರ್ಧಾರ ತೆಗೆದುಕೊಂಡು,ಈಗ ನಮ್ಮನ್ನೇ ಹೊಣೆಗಾರರನ್ನಾಗಿ ಬಿಂಬಿಸೋಕೆ ಹೊರಟಿದ್ದಾರೆಂದು ಆಕ್ರೋಶಗೊಂಡಿದ್ದಾರೆ.. ಹೀಗಾಗಿ ತಮ್ಮ ಆಪ್ತ ಬೆಂಬಲಿಗರನ್ನ ಮುಂದೆ ಬಿಟ್ಟು ಸಂತೋಷ್,ಪ್ರಹ್ಲಾದ್ ಜೋಶಿಯವರ ವಿರುದ್ಧ ದೂರು ಕೊಡಿಸಲು ಪ್ರಯತ್ನ ನಡೆಸಿದ್ದಾರೆ.. ಈ ಮೂಲಕ ಬಿ.ಎಲ್.ಸಂತೋಷ್ ಅಟಾಟೋಪಗಳಿಗೆ ಬ್ರೇಕ್ ಹಾಕಲು ಬಿಎಸ್ ವೈ ಹಾಗೂ ಬೊಮ್ಮಾಯಿ ಮುಂದಾಗಿದ್ದಾರೆಂಬ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ..
ಬಿಎಸ್ ವೈ ಬಣ ಟೀಂನ ವಾದವೇನು..?
೧) ವಿಧಾನಸಭಾ ಚುನಾವಣೆ ವೇಳೆ ನಮ್ಮಸಲಹೆಗಳನ್ನ ಕೇಳಲಿಲ್ಲ
೨) ನಾವು ಹೇಳಿದವರಿಗೆ ಟಿಕೆಟ್ ಕೊಡಲಿಲ್ಲ
೩) ಗೆಲ್ಲುವ ಸಾಮರ್ಥ್ಯ ವಿರುವ ಶಾಸಕರಿಗೆ ಟಿಕೆಟ್ ಮಿಸ್ ಮಾಡಿದ್ರು
೪) ಗುಜರಾತ್ ಮಾದರಿ ಎಂದು ಹಲವು ಬದಲಾವಣೆ ಮಾಡಿದ್ರು
೫) ಅವರಿಗೆ ಮನಸ್ಸಿಗೆ ಬಂದವರಿಗೆ ಟಿಕೆಟ್ ಕೊಡಿಸಿದ್ರು
೬) ಚುನಾವಣೆ ಪ್ರಚಾರದಲ್ಲೂ ಬೇಡದ ನಿರ್ಧಾರ ತೆಗೆದುಕೊಂಡ್ರು
೭) ಬೇಡಬೇಡವೆಂದ್ರೂ ಲಿಂಗಾಯತ ಸಮುದಾಯವನ್ನ ಮೈಮೇಲೆಳೆದುಕೊಂಡ್ರು
೮) ಈ ಎಲ್ಲಾ ಪರಿಣಾಮಗಳಿಂದಾಗಿಯೇ ನಾವು ಸೋಲಬೇಕಾಯ್ತು
೯) ಲೋಕಸಭಾ ಚುನಾವಣೆ ಎದುರಾಗಿದೆ
೧೦) ಈಗಲೂ ನಾವುಮೈಮರೆತರೆ ಹೆಚ್ಚು ಸೀಟು ಗೆಲ್ಲೋದು ಕಷ್ಟ
೧೧) ಸಂತೋಷ್ ಅವರ ಸಲಹೆಯಂತೆ ಹೋದ್ರೆ ಎಲ್ಲವನ್ನ ಕಳೆದುಕೊಳ್ಬೇಕಾಗುತ್ತದೆ
೧೨) ಹೀಗಾಗಿ ಸಂತೋಷ್ ಅವರ ಮೇಲೆ ನಿಮ್ಮ ನಿಯಂತ್ರಣ ತನ್ನಿ
ಸುಮಾರು ವಿಷಯಗಳನ್ನ ಗಮನದಲ್ಲಿಟ್ಟುಕೊಂಡು ಇದೀಗ ಅ ಸಂತೋಷ ಕೂಟಕ್ಕೆ ಬ್ರೇಕ್ ಹಾಕಲು ರಾಜಾಹುಲಿ ಟೀಂ ಸಿದ್ದತೆ ನಡೆಸಿದೆ.. ಒಟ್ನಲ್ಲಿ ಯಡಿಯೂರಪ್ಪನವರನ್ನ ಕೆಳಗಿಳಿಸಿದ ನಂತ್ರ ರಾಜ್ಯ ಬಿಜೆಪಿಯಲ್ಲಿಅಸಮಾಧಾನದ ಹೊಗೆಯೇ ಹೆಚ್ಚಾಗಿದೆ..ಅದ್ರಲ್ಲೂ ಲಿಂಗಾಯತ ಸಮುದಾಯದ ನಾಯಕರನ್ನ ಸೈಡ್ ಲೈನ್ ಮಾಡಲಾಗ್ತಿದೆ ಎಂಬ ಆರೋಪ ಬಣ ರಾಜಕೀಯಕ್ಕೆ ಕಾರಣವಾಗಿದೆ.. ವಿಧಾನಸಭೆ ಚುನಾವಣೆಯ ನಂತರ ಅದು ಮತ್ತಷ್ಟು ವಿಕೋಪಕ್ಕೆಹೋಗಿದೆ.. ಹೀಗಾಗಿ ಬಿ.ಎಲ್. ಸಂತೋಷ್ ವಿರುದ್ಧ ವರಿಷ್ಠರಿಗೆ ದೂರು ನೀಡಲು ಬಿಎಸ್ ವೈ ಆಪ್ತ ಬಣ ಮುಂದಾಗಿದೆ..