ಬೆಂಗಳೂರು: ಮೊನ್ನೆ ಅಂದ್ರೆ ಕಳೆದ ಮಂಗಳವಾರ. ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿರೋ ಪ್ರತಿಷ್ಟಿತ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಆ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಬೆಳ್ಳಂದೂರು ಪೊಲೀಸ್ರು ತನಿಖೆ ಕೈಗೊಂಡಿದ್ರು. ತನಿಖೆ ವೇಳೆ ಹುಸಿ ಬಾಂಬ್ ಕಾಲ್ ಮಾಡಿದವ್ರು, ಅದೇ ಕಂಪನಿಯ ಮಾಜಿ ಉದ್ಯೋಗಿ ಅನ್ನೊದ್ರ ಜೊತೆಗೆ ಟೀಂ ಲೀಡರ್ ಮೇಲಿನ ಕೋಪಕ್ಕೆ ಬೆದರಿಕೆ ಕರೆ ಮಾಡಿದ್ದಾಗಿ ಬೆಳಕಿಗೆ ಬಂದಿದ್ದು, ಮಾಡಿತ ತಪ್ಪಿಗೆ ಪೊಲೀಸ್ರ ಅತಿಥಿಯಾಗಿದ್ದಾನೆ. ಆ ಕುರಿತ ಸ್ಟೋರಿ ಇಲ್ಲಿದೆ.
ಅವತ್ತು. ಜೂನ್. 13. ಮಂಗಳವಾರ. ಬೆಳ್ಳಂಬೆಳಗ್ಗೆ ಕಚೇರಿಗೆ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ರು.ಅದೇ ವೇಳೆಗೆ ಕಚೇರಿ ನಂಬರ್ ಗೆ ಒಂದ್ ಕರೆ ಬಂದಿತ್ತು. ಕಾಲ್ ಬಂತು ಅಂತ ಕಚೇರಿಯ ರಿಸೆಪ್ಷನಿಸ್ಟ್ ಕಾಲ್ ರಿಸೀವ್ ಮಾಡ್ತಿದ್ದಂತೆ ಹೆಲೋ ಅಂದಿದ್ರು. ಹಾಗೆ ಮಾತಾಡ್ತಿದ್ದ ವೇಳೆ ಕಾಲ್ ರಿಸೀವ್ ಮಾಡಿದ ರಿಸೆಪ್ಷನಿಸ್ಟ್ ಒಂದ್ ಕ್ಷಣ ಬೆಚ್ಚಿ ಬಿದ್ದಿದ್ದಿಉಲ, ಎಲ್ಲರು ಕಚೇರಿಯಿಂದ ಓಡಿ ಬಂದಿದ್ರು. ಅಷ್ಟರಲ್ಲಾಗಿ ಪೊಲೀಸ್ರಿಗೂ ಸುದ್ದಿ ಮುಟ್ಟಿತ್ತು.
ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಂಪನಿಯ ಮಾಜಿ ಉದ್ಯೋಗಿಯಿಂದಲೇ ಈ ಬಾಂಬ್ ಬೆದರಿಕೆ ಬಂದಿದೆ ಅನ್ನೋದು ಬೆಳಕಿಗೆ ಬಂದಿದ್ದು, ಸದ್ಯ ತನಿಖೆ ಮುಂದುವರೆಸಿದ್ದ ಬೆಳ್ಳಂದೂರು ಪೊಲೀಸ್ರು ಆರೋಪಿ ನವನೀತ್ ಪ್ರಸಾದ್ ಎಂಬಾತನನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನವನೀತ್ ಪ್ರಸಾದ್ ಬಾಂಬ್ ಬೆದರಿಕೆ ಕರೆ ಮಾಡಲು ಕಾರಣ ಏನೆಂದು ಬಾಯ್ಬಿಟ್ಟು, ತಪ್ಪೊಪ್ಪಿಕೊಂಡಿದ್ದಾರೆ. ಆತ ಹೇಳಿದ ರೀಸನ್ ಮಾತ್ರ ತುಂಬಾ ಸಿಂಪಲ್ ಆಗಿದ್ರು, ಅದ್ರಿಂದ ಮಾತ್ರ ಪೊಲೀಸ್ರಿಗೆ ಪೀಕಲಾಟ ಶುರುವಾಗಿತ್ತು.
ಮಾರತ್ ಹಳ್ಳಿ ರಿಂಗ್ ರಸ್ತೆಯಲ್ಲಿರೋ ಐಡಿ ಕಂಪನಿಗಳ ಇಕೋ ಸ್ಪೇಸ್ ಕ್ಯಾಂಪಸ್ ನಲ್ಲಿರೋ ಐಬಿಡಿಓ ಕಂಪನಿಯಲ್ಲಿ ನವನೀತ್ ಪ್ರಸಾದ್ ಕೆಲಸ ಮಾಡ್ತಿದ್ದ.ಆದ್ರೆ, ಟೀಂ ಲೀಡರ್ ಹಾಗೂ ನವನೀತ್ ಪ್ರಸಾದ್ ನಡುವೆ ಹೊಂದಾಣಿಕೆ ಇರ್ಲಿಲ್ಲವಂತೆ. ಹೀಗಾಗಿ ಕಂಪನಿಯ ಎಂಡಿಯನ್ನ ಭೇಟಿ ಮಾಡಲು ನವನೀತ್ ಪ್ರಯತ್ನಿಸಿದ್ದ. ಆದ್ರೆ, ಅದಕ್ಕು ಅವಕಾಶ ಸಿಕ್ಕಿರ್ಲಿಲ್ಲ. ಅದ್ದರಿಂದ ಕೊನೆಗೆ ಕೆಲಸ ಬಿಟ್ಟಿದ್ದ ನವನೀತ್ . ಕೊನೆಗೆ ಟೀಂ ಲೀಡರ್ ಗೆ ಕಾಟ ಕೊಡ್ಬೇಕು ಎಂದು ದುರಾಲೋಚನೆ ಮಾಡಿದ್ದ ಪ್ರಸಾದ್ ನವನೀತ್ ಆಗಾಗ ನವನೀತ್ ಎಂದೇ ಪರಿಚಯ ಮಾಡಿಕೊಂಡು ಬೆದರಿಕೆ ಕರೆ ಮಾಡ್ತಿದ್ದನಂತೆ.
ಆದ್ರೆ, ಕಂಪನಿಯವ್ರು ಅಸಲಿ ಸತ್ಯ ಮುಚ್ಚಿಟ್ಟು, ಪೊಲೀಸ್ರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದಾಗಿ ಮಾಹಿತಿ ನೀಡಿದ್ರು. ಇನ್ನು ಆ ಸಂಬಂಧ ದಾಖಲಿಸಿಕೊಂಡಿದ್ದ ಬೆಳ್ಳಂದೂರು ಪೊಲೀಸ್ರು ತನಿಖೆ ಕೈಗೊಂಡು ಆರೋಪಿಯನ್ನ ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಆದ್ರೆ, ಸಹೋದ್ಯೋಗಿ ಮೇಲಿನಕೋಪಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸ್ರಿಗೆ ಟೆನ್ಷನ್ ಮಾಡಿದ್ದ ಆರೋಪಿ ಮಾಡಿದ್ದುಣ್ಣೋ ಮಹರಾಯ ಅಂತ ಕಂಬಿ ಹಿಂದೆ ಸೇರಿದ್ದಾನೆ.