ನವದೆಹಲಿ: ಎರಡು ವಿಸ್ಕಿ ಬಾಟ್ಲಿಗಳಲ್ಲಿ 13 ಕೋಟಿ ರೂ. ಮೌಲ್ಯದ ಕೊಕೇನ್ ತೆಗೆದುಕೊಂಡು ದೆಹಲಿಗೆ (New Delhi) ಬಂದಿದ್ದ 25 ವರ್ಷದ ಕಿನ್ಯಾ (Kenya ) ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. Backward Skip 10s ಆರೋಪಿ ಇಥಿಯೋಪಿಯಾನಿಂದ (Ethiopia) ಬಂದಿದ್ದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport) ಬಂಧಿಸಲಾಗಿದೆ.
ಆಕೆಯನ್ನು ಪರೀಕ್ಷಿಸಿದ ನಂತರ 13 ಕೋಟಿ ರೂ. ಮೌಲ್ಯದ ಕೊಕೇನ್ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಕೇನ್ನ್ನು ನೈರೋಬಿ ವಿಮಾನ ನಿಲ್ದಾಣದಲ್ಲಿ ಅವಳಿಗೆ ನೀಡಲಾಯಿತು. ಅದನ್ನು ದೆಹಲಿಯಲ್ಲಿರುವ ವ್ಯಕ್ತಿಗೆ ನೀಡಲು ಬಂದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.