ಆನೇಕಲ್ ;- ಶಾಂತಿಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಕುಮಾರ್.ವಿ ಅವರನ್ನು ಬೆಂಗಳೂರು ಹೊರ ವಲಯದ ಹುಲಿಮಂಗಲ ಸುತ್ತ ನೂರಾರು ಮಂದಿಗೆ ಸುಳ್ಳು ದಾಖಲೆ ಸೃಷ್ಟಿಸಿ, ವಂಚಿಸಿದ್ದ ಆರೋಪದಲ್ಲಿ ಹೆಬ್ಬಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಒಂದೇ ನಿವೇಶನವನ್ನು ಹಲವಾರು ಮಂದಿಗೆ ನೋಂದಾಯಿಸಿ ವಂಚಿಸುತ್ತಿದ್ದ ಮೋಸ ಹೋದ ನೊಂದವರ ನಿವೇಶನದಲ್ಲಿ ಬೇರೆಯವರು ಕಟ್ಟಡ ಕಟ್ಟಿದರೆ ಇನ್ನೊಂದು ನಿವೇಶನ ಕಟ್ಟಿಸಿಕೊಡುವ ಭರವಸೆ ನೀಡಿ ಯಾಮಾರಿಸುತ್ತಿದ್ದನಂತೆ. ಈ ಕುರಿತಂತೆ ಇಲ್ಲಿಯವರೆಗೆ 12 ವಂಚನೆ ಪ್ರಕರಣಗಳು ಜಯಕುಮಾರ್ ಮೇಲೆ ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು 32 ಮಂದಿ ಹೆಬ್ಬಗೋಡಿ ಠಾಣೆಗೆ ಈತನ ಮೇಲೆ ದೂರು ನೀಡಲು ಸಿದ್ಧರಿದ್ದು ನಾಳೆಯಿಂದಲೇ ಹಲವು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ.