ಬೆಂಗಳೂರು ;– ಸುಳ್ಳು ಹೇಳಿ, ಜನತೆಯ ದಾರಿ ತಪ್ಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಬಡ ಜನತೆಗೆ ರಾಜ್ಯ ಕಾಂಗ್ರೆಸ್ ಸರಕಾರವು ಅನ್ನ ಭಾಗ್ಯ ಯೋಜನೆಯಡಿ ಕೊಡಬೇಕೆಂದು ಹೊರಟ ಅಕ್ಕಿಯನ್ನು ದುರುದ್ದೇಶಪೂರ್ವಕ ನೀತಿ ನಿಯಮಗಳನ್ನು ಬದಲಿಸಿ ರಾಜ್ಯ ಸರಕಾರಕ್ಕೆ ಅಕ್ಕಿ ಕೊಡುವುದನ್ನು ಕೇಂದ್ರದ ನರೇಂದ್ರ ಮೋದಿಯವರ ಸರಕಾರವು ನಿಲ್ಲಿಸಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಲು ನಾವು ಎಫ್ಸಿಐಗೆ- ಕೇಂದ್ರಕ್ಕೆ ಮನವಿ ಮಾಡಿದ್ದೆವು. ತಕ್ಷಣದಲ್ಲಿ ಕರ್ನಾಟಕದ ಫುಡ್ ಕಾರ್ಪೊರೇಷನ್ ಪ್ರಾದೇಶಿಕ ಕಚೇರಿಯವರು ನಮಗೆ ಅನುಮತಿ ಇದೆ ಎಂದು ಪತ್ರ ಬರೆದರು. ನಂತರ ಕೇಂದ್ರವು ಸಭೆ ನಡೆಸಿ ನಿಯಮ ಬದಲಿಸಿ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂದಿದ್ದಾರೆ. ಇದರ ಹಿಂದೆ ರಾಜ್ಯದಲ್ಲಿ ಅನ್ನ ಭಾಗ್ಯ ಅಕ್ಕಿ ವಿತರಣೆ ತಡೆಯುವ ದುರುದ್ದೇಶ ಇದೆ ಎಂದು ಆರೋಪಿಸಲಾಗುತ್ತಿದೆ. ಖಾಸಗಿ ಖರೀದಿಗೆ ಅವಕಾಶ ಮತ್ತು ರಾಜ್ಯ ಸರಕಾರದಿಂದ ಖರೀದಿಗೆ ತಡೆ ಒಡ್ಡಿದ್ದಾಗಿ ಇನ್ನೊಂದು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.