ಹುಬ್ಬಳ್ಳಿ: ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರತಿ ಕುಟುಂಬಕ್ಕೆ ತಲಾ 10 ಕೀಲೋ ಅಕ್ಕಿ ವಿತರಣೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗತ್ತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು ಏಕೆಂದರೆ ನಾವು ಅಂದರೆ ಕೇಂದ್ರ ಸರ್ಕಾರ ಈಗಾಗಲೇ 5 ಕೀಲೋ ಕೊಡತಾ ಇದ್ದು ಮತ್ತೆ ಅವರು ಈಗ ಕೊಡಲು ಏನು ಇಲ್ಲ ವಿನಾಕಾರಣ ಇದೀಗ ಅಕ್ಕಿ ಬರಲ್ಲ ಅಂತಾ ಕುಂಟು ನೆಪ ಹೇಳತೀದಾರೆ ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ ಆಗುತ್ತದೆ ಎಂದರು.
ರಾಜ್ಯ ಸರ್ಕಾರದವರು ಇದೀಗ ಛತ್ತೀಸಗಡದಿಂದ ಅಕ್ಕಿ ತರ್ತೀವಿ ಅಂತೀದಾರೆ. ನಮಗೆ ಬಡಜನರಿಗೆ ಒಳ್ಳೆದಾದ್ರೆ ಸಾಕು
ಎಲ್ಲಿಂದ ತಗೊಬೇಕು, ಹೇಗೆ ತಗೊಬೇಕು ಅನ್ನೋ ಪ್ರಶ್ನೆ ಈಗ ಬರಲ್ಲ. ಆದರೆ ತರಸಬೇಕು ಮತ್ತು ರಾಜ್ಯದ ರೈತರು ಅಕ್ಕಿ ಕೊಡೊಕೆ ಮುಂದೆ ಬಂದ್ರೆ ಅದನ್ನು ಖರೀದಿ ಮಾಡಬೇಕು ಇದು ಒಳ್ಳೆಯ ಮಾರ್ಗ ಸಹ ಆಗಿದೆ. ಭಾರತೀಯ ಜನತಾ ಪಕ್ಷದವರು ಕೊಡಸಿ ಅನ್ನೋದು ಸರಿ ಅಲ್ಲ ಇದು ಯಾವ ನ್ಯಾಯ ಅಂದ ಅವರು ಅಕಸ್ಮಾತ್ ಒಂದನೇ ತಾರೀಖಿಗೆ ಅಕ್ಕಿ ಕೊಡದೆ ಹೋದ್ರೆ ನಾವು ಪ್ರತಿಭಟನೆ ಮಾಡ್ತೀವಿ ಇದರಲ್ಲಿ ಯಾವುದೇ ಸಂಶಯ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ವಾರ ನಾನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರದ ಜನಪ್ರೀಯತೆ ಬಹಳ ದಿನ ಉಳಿಯಲ್ಲ
ಇನ್ನೂ ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯಲ್ಲ ಎಂದ ಅವರು ರಾಜ್ಯದಲ್ಲಿ ಬರಗಾಲ ಇದೆ, 500 ಹಳ್ಳಿಗೆ ಕುಡಿಯೋ ನೀರಿನ ಸಮಸ್ಯೆ ಇದ್ದುಸರ್ಕಾರ ಇದನ್ನು ಗಂಬೀರವಾಗಿ ಪರಿಗಣಸ್ತಿಲ್ಲ ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿ ಸುಮ್ಮನಾಗಿದೆ ಏನು ಮಾಡೋದು ಕಾರ್ಯರೂಪಕ್ಕೆ ಬರಬೇಕಲ್ಲ. ಈಗ ಬರಗಾಲ ಇದ್ದ ಕಡೆ ಟಾಸ್ಕಪೋರ್ಸ್ ರಚನೆ ಮಾಡಬೇಕು ಕೂಡಲೇ ಬರ ಕಾಮಗಾರಿ ನಡೆಯಬೇಕು ಎಂದರು. ಗ್ಯಾರಂಟಿ ಭ್ರಮೆ ಹುಟ್ಟಿಸಿದ್ದು ನೋಡಿದ್ರೆ ಸರಕಾರದ ಜನ ಪ್ರೀಯತೆ ಬಹಳ ದಿನ ಉಳಿಯಲ್ಲ ಅಂತಾ ಕಾಣಿಸುತ್ತದೆ. ನೀರು ಕೊಡದ ಸರಕಾರವನ್ನು ತಗೆದುಕೊಂಡು ಏನ ಮಾಡಬೇಕು ಎಂದೂ ಅಸಮಾಧಾನ ವ್ಯಕ್ತಪಡಿಸಿದರು . ಭಾರತೀಯ ಜನತಾ ಪಕ್ಷ ಸೆಷನ್ ಮುಂಚೆ ವಿರೋಧ ಪಕ್ಷ ನಾಯಕನ ಆಯ್ಕೆ ಆಗತ್ತೆ ಎಂದ ಬಸವರಾಜ ಬೊಮ್ಮಾಯಿ ಎಂದರು